ಗುಣಮಟ್ಟದ ‌ವಿದ್ಯುತ್ ಸರಬರಾಜು ಕಾಮಗಾರಿಗೆ 3 ದಿನ ವಿದ್ಯುತ್ ನಿಲುಗಡೆ : ಗುತ್ತಿಗಾರು ವ್ಯಾಪ್ತಿಯ ಗ್ರಾಹಕರಿಗೆ‌ ಮೆಸ್ಕಾಂ ಮಾಹಿತಿ

0

ವಿದ್ಯುತ್ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಕಲ್ಪಿಸುವ ಉದ್ದೇಶದಿಂದ, ಗುತ್ತಿಗಾರು ವಿದ್ಯುತ್‌ ಉಪಕೇಂದ್ರದಿಂದ ಹೊಸದಾಗಿ ನಾಲ್ಕು 11ಕೆವಿ ಫೀಡರ್ ಗಳನ್ನು ರಚಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಯನ್ನು ಅತೀ ಶೀಘ್ರವಾಗಿ ಪೂರ್ಣಗೊಳಿಸುವ ಸಲುವಾಗಿ, ಪ್ರತೀ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಸದರಿ ಉಪಕೇಂದ್ರದಿಂದ ಹೊರಡುವ ಗುತ್ತಿಗಾರು ಮತ್ತು ಕೂತ್ಕುಂಜ 11ಕೆವಿ ಫೀಡರ್‌ಗೆ ಪೂರ್ವಾಹ್ನ 10:00 ಗಂಟೆಯಿಂದ ಸಾಯಂಕಾಲ 6:00 ಗಂಟೆಯವರೆಗೆ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ನಿಲುಗಡೆ ಮಾಡಲಾಗುವುದು ಹಾಗೂ ಉಳಿದ ದಿನಗಳಲ್ಲಿ ಕಾಮಗಾರಿಗೆ ಅನಿವಾರ್ಯವಿದ್ದಲ್ಲಿ ಸ್ವಲ್ಪ ಅವಧಿ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಆದ್ದರಿಂದ ಗುತ್ತಿಗಾರು ಶಾಖಾ ವ್ಯಾಪ್ತಿಯ ಗುತ್ತಿಗಾರು, ದೇವಚಳ್ಳ, ಮಡಪ್ಪಾಡಿ, ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕಾಗಿ ಕೋರಲಾಗಿದೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.