














ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸುಳ್ಯದಲ್ಲಿ ಪ್ರಥಮ ವರ್ಷದ ಬಿ.ಡಿ.ಎಸ್. ಮತ್ತು ಎಂ.ಡಿ.ಎಸ್ ವಿದ್ಯಾರ್ಥಿಗಳಿಗೆ“Anti Ragging Orientation” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ Dental Council of India, New Delhi ಮತ್ತು Anti Ragging ಸಮಿತಿಯ ಸದಸ್ಯರಾದ ಪ್ರೊ. ಡಾ. ನಿದರ್ಶ್ ಹೆಗ್ಡೆ, ಎಂ.ಡಿ.ಎಸ್, ಪಿ.ಎಚ್.ಡಿ. ಅವರು Anti Ragging ಕುರಿತು ಮಾಹಿತಿಗಳನ್ನು ನೀಡಿದರು.
ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಡಾ. ಮೋಕ್ಷ ನಾಯಕ್ ಉದ್ಘಾಟಿಸಿ, ರ್‍ಯಾಗಿಂಗ್ ಅನ್ನುವುದು ಮಾನವ ಹಕ್ಕು ಉಲ್ಲಂಘನೆ. ರ್‍ಯಾಗಿಂಗ್ ಮಾಡುವುದು ಹಾಗೂ ಪ್ರಚೋದಿಸುವುದು ಮಾಡಬಾರದು ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಇದರ ಕಮಿಟಿ ‘ಬಿ’ ಕಾರ್ಯದರ್ಶಿಗಳಾದ ಡಾ. ಜ್ಯೋತಿ ಆರ್ ಪ್ರಸಾದ್ ರವರು ವಿದ್ಯಾರ್ಥಿಗಳಿಗೆ ಕಾನೂನಿನ ಚೌಕಟ್ಟನ್ನು ವಿವರಿಸಿದರು.
ಸಂಯೋಜಕರಾದ ಡಾ. ಪ್ರಕಾಶ್ ಪೈ ಯವರು ಎಲ್ಲರನ್ನೂ ಸ್ವಾಗತಿಸಿದರು.
ಡಾ. ಶೈಲಾ ಪೈ, ಉಪಪ್ರಾಂಶುಪಾಲರು, ಡಾ. ದಯಾಕರ್ ಎಂ.ಎಂ., ಡಾ. ಕೃಷ್ಣಪ್ರಸಾದ್ ಎಲ್, ಡಾ. ಶರತ್ ಕುಮಾರ್ ಶೆಟ್ಟಿ, ಡಾ. ಕೃಷ್ಣವೇಣಿ, ಡಾ. ಕಿಶನ್‌ರಾಜ್, ಆಡಳಿತಾಧಿಕಾರಿ ಶ್ರೀ ಮಾಧವ ಬಿ.ಟಿ, ಎಲ್ಲಾ ವಿಭಾಗದ ೧೨೨ ಪದವಿ ಶಿಕ್ಷಣ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಧಿತರಿದ್ದರು.
ಡಾ. ಕೃಷ್ಣವೇಣಿಯವರು ಕಾರ್ಯಕ್ರಮದಲ್ಲಿ ವಂದನಾರ್ಪಣೆ ಮಾಡಿದರು. ಡಾ. ಸರ್ವಪ್ರಧಾ ಮತ್ತು ಡಾ. ಸರ್ಜಾ ಐಶ್ವರ್ಯ ಕಾರ್ಯಕ್ರಮನ್ನು ನಿರೂಪಿಸಿದರು.










