














ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು, ಇಲ್ಲಿ ನ.೪ ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಸರಕಾರಿ ಕಾಲೇಜುಗಳ ಚೆಸ್ ಪಂದ್ಯಾಟದಲ್ಲಿ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ದ್ವಿತೀಯ ಸ್ಥಾನ ಗಳಿಸಿಕೊಂಡಿದೆ.
ಈ ತಂಡದಲ್ಲಿ ಅಮೂಲ್ಯ ಎ ಕೆ ಅಂತಿಮ ಬಿ.ಕಾಂ, ಗುಣಶ್ರೀ ಕೆ. ದ್ವಿತೀಯ ಬಿ.ಎ., ದಕ್ಷತ್ ಎನ್ ದ್ವಿತೀಯ ಬಿ.ಎ, ಅತ್ರೇಯ ಎ ಎಸ್ ಪ್ರಥಮ ಬಿ.ಸಿ.ಎ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಸತೀಶ್ ಕುಮಾರ್ ಕೆ ಆರ್ ಮಾರ್ಗದರ್ಶನ ಮಾಡಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರಾದ ಶ್ರೀ ಸತೀಶ್ ಎನ್ ಪಿ ಅಭಿನಂದನೆ ಸಲ್ಲಿಸಿದ್ದಾರೆ.










