ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ

0

ಪಾಠದ ಜೊತೆ ಆಟ ಮತ್ತು ಸಂಸ್ಕಾರಕ್ಕೆ ಮಹತ್ವ ಕೊಡಬೇಕು : ಸೂಫಿ ಪೆರಾಜೆ

ಮಕ್ಕಳಿಗೆ ಪಾಠದ ಜೊತೆಗೆ ಕ್ರೀಡೆ ಮತ್ತು ಸಂಸ್ಕಾರ ಶಿಕ್ಷಣ ಕೊಡಬೇಕು. ಆಗ ಅವರು ದೇಶದ ಉತ್ತಮ ಪ್ರಜೆಗಳಾಗುತ್ತಾರೆ. ಈ ಕೆಲಸ ವಿವೇಕಾನಂದ ವಿದ್ಯಾಸಂಸ್ಥೆ ವಿನೋಬನಗರ ಜಾಲ್ಸುರು ಇಲ್ಲಿ ಅಗುತ್ತಿರುವುದು ತುಂಬಾ ಅಭಿನಂದನೀಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸೂಫಿ ಪೆರಾಜೆ ಹೇಳಿದರು .

ಅವರು ವಿವೇಕಾನಂದ ಶಾಲೆಯ ವಾರ್ಷಿಕ ಕ್ರೀಡಾಕೂಟದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.

ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಳದ
ಮೈದಾನದಲ್ಲಿ ನಡೆದ ಕ್ರೀಡಾಕೂಟದ ಉದ್ಘಾಟನೆಯನ್ನು ಉದ್ಯಮಿ ಸಂತೋಷ ಕೈಕಾರ ನೆರವೇರಿಸಿ ಶುಭ ಹಾರೈಸಿದರು.

ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವಿದ್ಯಾಸಂಸ್ಥೆಯ ಅಧ್ಯಕ್ಷ ನ. ಸೀತಾರಾಮ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ಸಂಸ್ಥೆಯ ಸಂಚಾಲಕ ಡಾ ಗೋಪಾಲಕ್ರಷ್ಣ ಭಟ್, ಕೋಶಾಧಿಕಾರಿ ಸುಧಾಕರ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕ್ರೀಡಾ ಭಾರತಿ ಸುಳ್ಯ ಘಟಕದ ಅಧ್ಯಕ್ಷ ಎ. ಸಿ ವಸಂತ, ಅಡ್ಕಾರು ಸುಬ್ರಹ್ಮಣ್ಯ ದೇವಸ್ಥಾನದ
ಮೊಕ್ತೆಸರ ಗುರುರಾಜ್ ಭಟ್ ಅಡ್ಕಾರು, ಆಡಳಿತ ಮಂಡಳಿಯ ಸದಸ್ಯರಾದ ಪುರುಷೋತ್ತಮ ಕಿರ್ಲಾಯ, ಶ್ಯಾಮ್ ಪ್ರಸಾದ ಅಡ್ಡ೦ತಡ್ಕ, ಹೇಮಂತ್ ಮಠ, ಶಾಲಾಭಿವೃದ್ಧಿ ಸಮೀತಿ ಅಧ್ಯಕ್ಷ ರವಿರಾಜ್ ಗಬ್ಬಲಡ್ಕ, ಉಪಾಧ್ಯಕ್ಷ ಮಣಿಕಂಠ ಹಾಸ್ಪರೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಶೋಕ್ ಅಡ್ಕಾರು, ಮಾತೃ ಭಾರತಿ ಅಧ್ಯಕ್ಷೆ ಶ್ರೀಮತಿ ಜಲಜಾ ಆಚಾರ್ ಶಾಂತಿ ನಗರ, ರೋಟರಿ ವಿದ್ಯಾ ಸಂಸ್ಥೆಯ ದೈಹಿಕ ಶಿಕ್ಷಕರಾದ ರಂಗನಾಥ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸುಮಿತ ಕಾಟೂರು ವಿದ್ಯಾರ್ಥಿಗಳಿಗಳಿಂದ ಪಥ ಸಂಚಲನವನ್ನು ನಡೆಸಿ ಕೊಟ್ಟರು.
ಸ೦ಸ್ಥೆಯ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ ಸ್ವಾಗತಿಸಿ, ಸಹ ಶಿಕ್ಷಕ ಶಶಿಧರ್ ಎಂ. ವಂದಿಸಿ, ಸಹಶಿಕ್ಷಕ ಆಶೀಷ್ ರಾವ್ ದೊಡ್ಡೇರಿ ನಿರೂಪಿಸಿದರು.