ಎಡಮಂಗಲ- ನಡುಬೈಲು ರಸ್ತೆಯ ಅಳಕ್ಕೆಯಲ್ಲಿ ಸೇತುವೆ ನಿರ್ಮಾಣಕ್ಕೆ ಶಾಸಕರಿಂದ ಗುದ್ದಲಿ ಪೂಜೆ

0

ಎಡಮಂಗಲ ಶ್ರೀ ಪಂಚಾಲಿಂಗೇಶ್ವರ ದೇವಸ್ಥಾನದಿಂದ ನಡುಬೈಲು ಸುಬ್ರಾಯ ದೇವಸ್ಥಾನ ಸಂಪರ್ಕ ರಸ್ತೆಯಲ್ಲಿ ನಡುಬೈಲಿನಲ್ಲಿ ಶಾಸಕರ ಅನುದಾನದಲ್ಲಿ ೨೫ ಲಕ್ಷ ಬಿಡುಗಡೆಗೊಂಡಿದ್ದು, ನ.೧೦ ರಂದು ಶಾಸಕರಾದ ಕು. ಭಾಗೀರಥಿ ಮುರುಳ್ಯರವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಎಡಮಂಗಲ ಸೊಸೈಟಿ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗಿರಿ, ಎಡಮಂಗಲ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು ಮತ್ತು ಸದಸ್ಯರು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಎಡಮಂಗಲ ಇದರ ವ್ಯವಸ್ಥಾಪನಾ ಸಮಿತಿ ಸದಸ್ಯ ಗಿರೀಶ್ ನಡುಬೈಲು, ಹಾಗೂ ರಸ್ತೆ ಪಲಾನುಭವಿಗಳು ಊರವರು ಉಪಸ್ಥಿತರಿದ್ದರು.