ನಾರ್ಕೋಡು ಅಂಗನವಾಡಿ ಸಹಾಯಕಿ ಶ್ರೀಮತಿ ಲೋಲಾಕ್ಷಿಯವರಿಗೆ ಬೀಳ್ಕೋಡುಗೆ

0

ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರ್ಕೋಡು ಅಂನವಾಡಿ ಸಹಾಯಕಿ ಶ್ರೀಮತಿ ಲೋಲಾಕ್ಷಿ ಕೆ. ಎಸ್ ರವರು ವಯೋ ನಿವೃತ್ತಿ ಹೊಂದಿದ್ದು ಅವರಿಗೆ ಬೀಳ್ಕೋಡುಗೆ ಸಮಾರಂಭವನ್ನು ಏರ್ಪಡಿಸಲಾಯಿತು.

ಈ ಸಂದರ್ಭದಲ್ಲಿ ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಪಂಚಾಯತ್ ಸದಸ್ಯರಾದ ಮುತ್ತಪ್ಪ ಪೂಜಾರಿ ಮೊರಂಗಲ್ಲು, ಚಂದ್ರಕಾಂತ ನಾರ್ಕೋಡು, ಮೀನಾಕ್ಷಿ ಕೆ, ಆಲೆಟ್ಟಿ ಸೊಸೈಟಿ ನಿವೃತ್ತ
ಸಿ. ಇ. ಒ ರತ್ನಾಕರ ಕುಡೆಕಲ್ಲು, ಮುಖ್ಯ ಶಿಕ್ಷಕಿ ಸುನಂದಾ ಜಿ, ಆರೋಗ್ಯ ಸಹಾಯಕಿ ಸೌಮ್ಯ, ಗಂಗಾಧರ ಗೌಡ ನಾರ್ಕೋಡು, ಆಶಾ ಕಾರ್ಯಕರ್ತೆ ರತ್ನಾವತಿ ಕುಡೆಕಲ್ಲು, ಮತ್ತಿತರರು ಉಪಸ್ಥಿತರಿದ್ದರು.