ಪಂಜ: ಯುವಕ -ಯುವತಿ ಮಂಡಲಗಳ ನೂತನ ಪದಾಧಿಕಾರಿಗಳ ಆಯ್ಕೆ

0

ಜೈ ಕರ್ನಾಟಕ ಯುವಕ ಮಂಡಲ (ರಿ) ಮತ್ತು ಕೃಪಾ ಯುವತಿ ಮಂಡಲ(ರಿ) ಐವತ್ತೊಕ್ಲು-ಪಂಜ ಇದರ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಪದಗ್ರಹಣ ಸಮಾರಂಭ ಜರುಗಿತು.
ಯುವಕ ಮಂಡಲದ ಅಧ್ಯಕ್ಷರಾಗಿ ಶರತ್ ಕೋಡಿ, ಉಪಾಧ್ಯಕ್ಷರಾಗಿ ವಿನೋದ ಕೆಬ್ಲಾಡಿ , ಕಾರ್ಯದರ್ಶಿಯಾಗಿ ಅಶೋಕ್ ಕೋಡಿ, ಖಜಾಂಜಿಯಾಗಿ ತಿರುಮಲೇಶ್ವರ ಬನ, ಜತೆ ಕಾರ್ಯದರ್ಶಿಯಾಗಿ ಪುನೀತ್ ಜಾರಿಗೆತ್ತಡಿ ,ಕ್ರೀಡಾ ಕಾರ್ಯದರ್ಶಿಯಾಗಿ ಅಶೋಕ್ ಕೋಟಿಯಡ್ಕ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜಗದೀಶ್ ಕೋಟಿಯಡ್ಕ ಪದಗ್ರಹಣ ಸ್ವೀಕರಿಸಿದರು. ಯುವತಿ ಮಂಡಲದ ಅಧ್ಯಕ್ಷರಾಗಿ ಸತ್ಯಾವತಿ ಶೇಡಿಗುಂಡಿ,
ಕಾರ್ಯದರ್ಶಿಯಾಗಿ ಕಾವ್ಯ ಅಳ್ಪೆ ,
ಉಪಾಧ್ಯಕ್ಷೆಯಾಗಿ ನಳಿನಿ ಕೋಡಿ,
ಜತೆ ಕಾರ್ಯದರ್ಶಿಯಾಗಿ ಕಮಲಾಕ್ಷಿ ಶೇಡಿಗುಂಡಿ, ಉಪ ಕಾರ್ಯದರ್ಶಿಯಾಗಿ ಪ್ರಿಯ ಕರಿಮಜಲು, ಖಜಾಂಜಿಯಾಗಿ ಶಿಲ್ಪಾ ಕೋಟಿಯಡ್ಕ , ಕ್ರೀಡಾ ಕಾರ್ಯದರ್ಶಿಯಾಗಿ ಭಾರತಿ ಕೋಡಿ ಪದಗ್ರಹಣ ಸ್ವೀಕರಿಸಿದರು.