ಆಲೆಟ್ಟಿ: ಸರಕಾರಿ ಶಾಲೆಯ ಶತಮಾನೋತ್ಸವದ ನೆನಪಿಗಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ

0

ಶಾಸಕರಿಂದ ರೂ. 10 ಲಕ್ಷ ಅನುದಾನದ ಭರವಸೆ

ಆಲೆಟ್ಟಿ( ನಾರ್ಕೋಡು) ಸರಕಾರಿ ಹಿರಿಯ ಪ್ರಾಥಮಿಕ
ಶಾಲಾ ಶತಮಾನೋತ್ಸವದ ಸವಿನೆನಪಿಗಾಗಿ ಸಂಸದ
ಕ್ಯಾ. ಬ್ರಿಜೇಶ್ ಚೌಟ ರವರ ಶಿಫಾರಸ್ಸಿನ ಮೇರೆಗೆ ಮಂಗಳೂರಿನ
ಎಂ.ಆರ್. ಪಿ. ಎಲ್ ನಿಂದ ರೂ. 25 ಲಕ್ಷ ಅನುದಾನ ಮಂಜೂರಾಗಿದ್ದು ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಶಾಸಕಿ
ಕು. ಭಾಗೀರಥಿ ಮುರುಳ್ಯ
ರವರು ನ. 10 ರಂದು ನೆರವೇರಿಸಿದರು.

ತೆಂಗಿನ ಕಾಯಿ ಒಡೆಯುವ ಮೂಲಕ ಗುದ್ದಲಿ ಪೂಜೆ ನೆರವೇರಿಸಿಮಾತನಾಡಿದ ಅವರು ಕಟ್ಟಡ ನಿರ್ಮಾಣಕ್ಕೆ
ರೂ.10 ಲಕ್ಷ ಅನುದಾನ ಸರ್ಕಾರದಿಂದ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ
ಅಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ,ಮಾಜಿ ಅಧ್ಯಕ್ಷ ಕೃಪಾಶಂಕರ ತುದಿಯಡ್ಕ, ಶತಮಾನೋತ್ಸವ ಸಮಿತಿ ಅಧ್ಯಕ್ಷ ತೀರ್ಥಕುಮಾರ್
ಕುಂಚಡ್ಕ, ಕಾರ್ಯದರ್ಶಿ ಗಿರೀಶ್ ನಾರ್ಕೋಡು,
ಶಾಲಾ ಮುಖ್ಯ ಶಿಕ್ಷಕಿ ಸುನಂದಾ ಜಿ, ಎಸ್. ಡಿ. ಎಂ. ಸಿ. ಅಧ್ಯಕ್ಷ ಬಾಲಚಂದ್ರ ಏಣಾವರ, ಪಂಚಾಯತ್ ಸದಸ್ಯ ಚಂದ್ರಕಾಂತ ನಾರ್ಕೋಡು, ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ರತ್ನಾಕರ ಕುಡೆಕಲ್ಲು, ಅಧ್ಯಕ್ಷ ಪ್ರಶಾಂತ್ ಕೋಲ್ಚಾರು, ಕಾರ್ಯದರ್ಶಿ ದುರ್ಗಾಪ್ರಸಾದ್ ಕುಡೆಕಲ್ಲು, ಕೋಶಾಧಿಕಾರಿ ಸಂತೋಷ್ ಕಲ್ಲೆಂಬಿ, ರಾಧಾಕೃಷ್ಣ ಕೋಲ್ಚಾರು, ರಾಮಚಂದ್ರ ಬಾಳೆಹಿತ್ಲು, ಪ್ರವೀಣ್ ಕಲ್ಲೆಂಬಿ, ಜಗದೀಶ್ ಸರಳಿಕುಂಜ, ಮುಕುಂದ ನಾರ್ಕೋಡು, ರಾಕೇಶ್ ಕುಡೆಕಲ್ಲು, ಶಿವಪ್ರಸಾದ್ ಆಲೆಟ್ಟಿ,ಎಸ್. ಡಿ. ಎಂ. ಸಿ. ಉಪಾಧ್ಯಕ್ಷೆ ಮಾಲ, ಸದಸ್ಯರಾದ ವಿಶಾಲಾಕ್ಷಿ, ಶಶಿಕಲಾ, ಶಾರದಾ ಹಾಗೂ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಸಮಿತಿ ಕೋಶಾಧಿಕಾರಿ ರಾಮಚಂದ್ರ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.