ನಾಳೆಯಿಂದ(ನ.11)ನಾಮಪತ್ರ ಸಲ್ಲಿಕೆ ಆರಂಭ















ಸುಳ್ಯ ಕೊಡಿಯಾಲಬೈಲ್ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಚುನಾವಣೆ ನ.23 ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆ ನಾಳೆ(ನ.11) ಯಿಂದ ಆರಂಭಗೊಳ್ಳಲಿದೆ.
ಒಟ್ಟು 13 ನಿರ್ದೇಶಕರ ಆಯ್ಕೆ ನಡೆಯಬೇಕಾಗಿದ್ದು, 7 ಸಾಮಾನ್ಯ ಸ್ಥಾನಗಳಿಗೆ, ಪರಿಶಿಷ್ಟ ಜಾತಿ ಮೀಸಲು ಸ್ಥಾನ 1,ಪರಿಶಿಷ್ಟ ಪಂಗಡ ಮೀಸಲು ಸ್ಥಾನ 1,
ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನ 1,ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನ 1, ಮಹಿಳಾ ಮೀಸಲು ಸ್ಥಾನಗಳು 2 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ನ.11 ರಂದು ನಾಮ ಪತ್ರ ಸಲ್ಲಿಕೆ ಆರಂಭಗೊಂಡು ನ.15 ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.ನ.16 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನ.17 ನಾಮ ಪತ್ರ ಹಿಂಪಡೆಯಲು ಕೊನೆಯ ದಿನ.ಅಂದೇ ಚಿಹ್ನೆ ಹಂಚಿಕೆ ನಡೆಯಲಿದೆ. ನ.23 ಆದಿತ್ಯವಾರದಂದು ಚುನಾವಣೆ ನಡೆದು ಸಂಜೆ ಪಲಿತಾಂಶ ಘೋಷಣೆಯಾಗಲಿದೆ.ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ.ಕರ್ತವ್ಯ ನಿರ್ವಹಿಸಲಿದ್ದಾರೆ.










