ಸುಳ್ಯ ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದ ಸುಳ್ಯ ಘಟಕದಲ್ಲಿ ವ್ಯವಸ್ಥಾಪಕರಾಗಿದ್ದ ವಸಂತ ನಾಯ್ಕ್ ರವರು ಮಂಗಳೂರು ವಿಭಾಗದ ಉಡುಪಿ ಘಟಕಕ್ಕೆ ನ.11 ರಂದು ವರ್ಗಾವಣೆಗೊಂಡರು.















ಇವರು ಸುಳ್ಯ ಘಟಕದಲ್ಲಿ ಪ್ರಥಮವಾಗಿ ಪ್ರಭಾರ ವ್ಯವಸ್ಥಾಪಕರಾಗಿ, ಪಾಳಿಯ ಮುಖ್ಯಸ್ಥರಾಗಿ, ಸಹಾಯಕ ಕಾರ್ಯ ಅಧೀಕ್ಷಕರಾಗಿ, ವಿಭಾಗೀಯ ಕಾರ್ಯ ಅಧೀಕ್ಷಕರಾಗಿ ಮತ್ತು ಪ್ರಭಾರ ವಿಭಾಗೀಯ ತಾಂತ್ರಿಕ ಅಭಿಯಂತರರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ವ್ಯವಸ್ಥಾಪಕರಾಗಿ ಭಡ್ತಿ ಹೊಂದಿದ್ದರು.










