ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಾಹಿನಿ ಸುಳ್ಯ ಘಟಕದ ಮಹಾಸಭೆ

0

ನೂತನ ಅಧ್ಯಕ್ಷರಾಗಿ ಮಹೇಶ್ ಕಲ್ಲಪಣೆ ಕಾರ್ಯದರ್ಶಿ ಯಾಗಿ ರಂಜಿತ್ ದರ್ಖಾಸ್ತು

ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಾಹಿನಿ ಸುಳ್ಯ ಘಟಕದ ಮಹಾಸಭೆಯು
ನ.9ರಂದು ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ಸ್ನೇಹ ಸದನದಲ್ಲಿ ಘಟಕದ ಅಧ್ಯಕ್ಷರಾದ ಹರೀಶ್ ಬೆಳ್ಳಾರೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷ ರಾದ ಶ್ರೀಮತಿ ನೂತನ ನೆಟ್ಟಾರು ವಾರ್ಷಿಕ ವರದಿ ಮಂಡಿಸಿದರು. ಸಭೆಯಲ್ಲಿ ಮುಂದಿನ ವರ್ಷ ವರ್ಷದ ನೂತನ ಪದಾಧಿಕಾರಿಗಳನ್ನು ಚುನಾವಣಾ ಅಧಿಕಾರಿ ಸುನಿಲ್ ಪಟ್ಟೆ ಸಭೆಯಲ್ಲಿ ಪರಿಚಯಿಸಿದರು. ಮುಂದಿನ ನೂತನ ಅಧ್ಯಕ್ಷರಾಗಿ ಮಹೇಶ್ ಕಲ್ಲಪಣೆ ಕಾರ್ಯದರ್ಶಿಯಾಗಿ ರಂಜಿತ್ ದರ್ಕಾಸ್ತು ಉಪಾಧ್ಯಕ್ಷರಾಗಿ ಶ್ರೀಮತಿ ನೂತನ ಪ್ರವೀಣ್ ನೆಟ್ಟಾರ್ ಮತ್ತು ಬಾಲಕೃಷ್ಣ ತಡಗಜೆ ಜೊತೆ ಕಾರ್ಯದರ್ಶಿ ಚಂದ್ರವತಿ ರವೀಂದ್ರ ಬಾಜಿನಡ್ಕ ಕೋಶಾಧಿಕಾರಿಯಾಗಿ ಹರೀಶ್ ದೋಳ ಆಯ್ಕೆಯಾದರು.
ಪದಗ್ರಹಣ ಸಮಾರಂಭ ಮತ್ತು ಮುಂದಿನ ಕಾರ್ಯ ಯೋಜನೆಗಳ ಕುರಿತು ಚರ್ಚಿಸಲಾಯಿತು.ವೇದಿಕೆಯಲ್ಲಿ ಲೋಹಿತ್ ರೆಂಜಾಳ,ಹಾಗೂ ಸಭೆಗೆ ಘಟಕದ ಪೂರ್ವಧ್ಯಕ್ಷರು, ಮತ್ತು ಘಟಕದ ಸದಸ್ಯರು ಉಪಸ್ಥಿತರಿದ್ದರು.ಘಟಕದ ಕಾರ್ಯದರ್ಶಿ ನವೀನ್ ರಾಮಕುಮೇರಿ ವಂದಿಸಿದರು.