ಋತಾಯು ಆಯುರ್ವೇದ ಸ್ವಾಸ್ಥ್ಯ ನಿಲಯದ ಡಾ.ಯಶಸ್ವಿನಿ ಭಾರದ್ವಾಜ್ ರಶ್ಯಾಕ್ಕೆ

0

ಋತಾಯು ಆಯುರ್ವೇದ ಸ್ವಾಸ್ಥ್ಯ ನಿಲಯ ಅರಂಬೂರು ಸುಳ್ಯ ಇಲ್ಲಿಯ ಆಯುರ್ವೇದ ತಜ್ಞ ವೈದ್ಯೆಯಾಗಿರುವ ಡಾ.ಯಶಸ್ವಿನಿ ಭಾರದ್ವಾಜ್ ರವರು ರಶ್ಯಾದ ನೇಶನಲ್ ಆಯುರ್ವೇದ ಮೆಡಿಕಲ್ ಅಸೋಸಿಯೇಶನ್ ಮತ್ತು ವೇದ ಫೌಂಡೇಶನ್ ಏರ್ಪಡಿಸಿರುವ ಆಯುರ್ವೇದ ಕಾನ್ಫರೆನ್ಸ್ ಹಾಗೂ ವಿಶೇಷ ಆಯುರ್ವೇದ ಕೋರ್ಸ್ ನಲ್ಲಿ ಉಪನ್ಯಾಸ ನೀಡಲು ರಶ್ಯಾ ದೇಶದ ಸೈಬೀರಿಯಾ ಪ್ರಾಂತ್ಯದ ನೊವೋಸಿಬಿರ್ಸ್ಕ್ ಗೆ ಇಂದು ತೆರಳಿದ್ದಾರೆ. ಈ ಕಾನ್ಫರೆನ್ಸ್ ನವೆಂಬರ್ 13 ರಿಂದ 24 ರ ವರೆಗೆ ನಡೆಯಲಿದೆ.

ಋತಾಯು ಆಯುರ್ವೇದ ಸ್ವಾಸ್ಥ್ಯ ನಿಲಯದಲ್ಲಿ ಆಯುರ್ವೇದ ತಜ್ಞ ವೈದ್ಯರುಗಳಾದ ಡಾ.ದೀನಪ್ರಕಾಶ್ ಭಾರದ್ವಾಜ್ ಹಾಗೂ ಡಾ.ರೋಹಿಣಿ ಭಾರದ್ವಾಜ್ ರವರ ಪುತ್ರಿಯಾದ ಡಾ.ಯಶಸ್ವಿನಿ ಕಳೆದ 8 ವರ್ಷಗಳಿಂದ ಈ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದು, ಅಲ್ಲಿ ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಈ ಸಂಸ್ಥೆಯು ವಿಕಾಸಗೊಳಿಸಿರುವ ಹಸ್ತನಾಡಿ ಪರೀಕ್ಷಾ ಸಾಧನವಾಗಿರುವ ವೇದ ಪಲ್ಸ್ ಉಪಕರಣದ ಆಯುರ್ವೇದ ಪ್ರಕೃತಿ ಹಾಗೂ ಮಾನಸ ಪ್ರಕೃತಿ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಲು ಡಾ.ಯಶಸ್ವಿನಿಯವರು ವಿಶೇಷ ಕೊಡುಗೆ ನೀಡಿದ್ದಾರೆ.