ದ್ವಿಚಕ್ರ ಸವಾರರು ಬಿದ್ದು ಗಾಯ, ಸ್ಥಳೀಯ ಯುವಕರಿಂದ ಶ್ರಮದಾನ ಮೂಲಕ ಮಣ್ಣು ತೆರವು ಕಾರ್ಯ
ಬೀರಮಂಗಲ ರಂಜನ್ ಸ್ಟೋರ್ ಬಳಿ ಕುಡಿಯುವ ನೀರಿನ ಪೈಪ್ ಕಾಮಗಾರಿಗೆ ಅಗೆದ ಮಣ್ಣುರಾಶಿ ಮಳೆಗೆ ಬಂದು ತಿರುವಿನಲ್ಲಿ ರಾಶಿಗೊಂಡಿತ್ತು.
ಆ ಮಣ್ಣಿನಲ್ಲಿ ಕಲ್ಲಿನ ಉಡಿಗಳು ಇದ್ದ ಕಾರಣ ಇದರ ಮೇಲೆ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರು ಸ್ಕಿಡ್ಡಾಗಿ ಬಿದ್ದು ಗಾಯ ಗೊಂಡಿದ್ದರು.
















ಇದನ್ನು ತಿಳಿದ ಸ್ಥಳೀಯ ಯುವಕರು ಕೂಡಲೇ ಶ್ರಮದಾನ ಮಾಡುವ ಮೂಲಕ ಮಣ್ಣನ್ನು ತೆರೆವುಗೊಳಿಸುವ ಕಾರ್ಯ ನಡೆಸಿ ಆಪತ್ಬಾಂಧವರಾಗಿದ್ದಾರೆ.
ಶ್ರಮದಾನದಲ್ಲಿ ಸ್ಥಳೀಯರಾದ ಅರುಣ್ ಕೆ, ನವೀನ್ ಎಸ್,ಜಗದೀಶ ಬಂಗ್ಲೆಗುಡ್ಡೆ, ತಿಲಕ್ ರಾಜ್ ಬಂಗ್ಲೆಗುಡ್ಡೆ, ರಾಜೇಶ್ ಬಂಗ್ಲೆಗುಡ್ಡೆ, ವಿಜಯ ಕುಮಾರ್, ರವಿ ರಂಜನ್ ಸ್ಟೋರ್ ಮೊದಲಾದವರು ಭಾಗವಹಿಸಿದ್ದರು.










