ಪಂಜ ವಲಯ ಕಾಂಗ್ರೆಸ್ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ನ.09 ರಂದು ವಿ.ಕೆ ರೆಸಿಡೆನ್ಸಿಯ ಸಭಾಂಗಣದಲ್ಲಿ ಪಂಜದ ಹಿರಿಯ ಕಾಂಗ್ರೆಸ್ ನಾಯಕರಾದ ಸತ್ಯನಾರಾಯಣ ಭಟ್ ಕಾಯಂಬಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.















ನೂತನ ಅಧ್ಯಕ್ಷರಾಗಿ ಕುಸುಮಾದರ ಕೆರೆಯಡ್ಕ, ಕಾರ್ಯದರ್ಶಿಯಾಗಿ ಲೋಕನಾಥ್ ಕೆ ಬಿ, ಖಜಾಂಜಿಯಾಗಿ ಅಶೋಕ್ ಡಿಸೋಜ ಮತ್ತು ಜೊತೆ ಕಾರ್ಯದರ್ಶಿಯಾಗಿ ಮಹಮ್ಮದ್ ನೇಮನ ಕಜೆ, ಉಪಾಧ್ಯಕ್ಷರುಗಳಾಗಿ ರವಿ ಚಲ್ಲಕೋಡಿ , ರಫಿಕ್ ಸಿ ಎಂ, ಸೆಲಿನಾ ಡಿ’ಸೋಜ, ರಾಮಚಂದ್ರ ಅಡ್ಡತೋಡು ಜಮಾಲುದ್ದೀನ್ ಪಂಜ ಇವರುಗಳನ್ನು ಸರ್ವಾನುಮತದಿಂದ ಆರಿಸಲಾಯಿತು ವೇದಿಕೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಅಬ್ದುಲ್ ಗಪೂರ್ ಕಲ್ಮಡ್ಕ ಹಾಗೂ ಪಂಜ ಗ್ರಾಮ ಪಂಚಾಯಿತ್ ಸದಸ್ಯರಾದ ಲಕ್ಷ್ಮಣ ಗೌಡ ಬೊಳ್ಳಾಜೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಯರಾಮ ಕಂಬಳ ಸ್ವಾಗತಿಸಿದರು. ಚಿನ್ನಪ್ಪ ಸಂಕಡ್ಕ ವಂದಿಸಿದರು. ಸಭೆಯಲ್ಲಿ ಐವತೊಕ್ಲು ಮತ್ತು ಕೂತುಕುಂಜ ಗ್ರಾಮದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಹಾಜರಿದ್ದರು.










