
ಸುಳ್ಯ ತಾಲೂಕಿನ ಅರಂತೋಡು ಮತ್ತು ಮರ್ಕಂಜ ಗ್ರಾಮ ಸಂಪರ್ಕಿಸುವ ಗ್ರಾಮಸ್ಥರ ಬಹು ಬೇಡಿಕೆಯ ಬಲ್ನಾಡು ಹೊಳೆಯ ಅರಮನೆಗಯ ಸೇತುವೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನ.12 ಗುದ್ದಲಿ ಪೂಜೆ ನೆರವೇರಿಸಿದರು.
ಸುಮಾರು 50 ವರ್ಷಗಳಿಂದ ಅರಂತೋಡು ಮತ್ತು ಮರ್ಕಂಜ ವ್ಯಾಪ್ತಿಯ ಬಲ್ನಾಡು ಹೊಳೆಯ ಅರಮನೆಗಯ ಬಳಿ ಸೇತುವೆ ಇಲ್ಲದೆ ಗ್ರಾಮಸ್ಥರು ಸಂಕಷ್ಟಕ್ಕೆ ಒಳಗಾಗಿದ್ದರು. ಈ ನಿಟ್ಟಿನಲ್ಲಿ ಗ್ರಾಮಸ್ಥರ ಬಹು ಬೇಡಿಕೆಯ ಸೇತುವೆಗೆ ಸುಮಾರು175 ಲಕ್ಷ ರೂಪಾಯಿಗಳಲ್ಲಿ ಸೇತುವೆಗೆ ಅನುದಾನ ಬಿಡುಗಡೆ ಗೊಂಡಿದ್ದು ಇದರ ಗುದ್ದಲಿ ಪೂಜೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು. ಬಳಿಕ ಮಾತನಾಡಿ ಅವರು ಸುಮಾರು ವರ್ಷಗಳಿಂದ ಇಲ್ಲಿಯ ಗ್ರಾಮಸರು ಸೇತುವೆ ನಿರ್ಮಾಣದ ಬಹು ಬೇಡಿಕೆಯ ಪರಿಶ್ರಮಕ್ಕೆ ಈಗ ಮುಕ್ತಿ ದೊರಕಿದೆ. ಹಾಗೂ ನನಗೆ ಅನುದಾನ ತರಿಸಲು ಸಹಕಾರ ನೀಡಿದ ಪಂಚಾಯತ್ ಅಧಿಕ್ಷರು, ಸಿಬ್ಬಂದಿ ವರ್ಗ, ಇಲಾಖೆಯವರಿಗೆ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಸಹಾಯದಿಂದ ಸಾಧ್ಯವಾಗಿದೆ. ಅಲ್ಲದೆ ಮಳೆಗಾಲದ ಮುಂಚಿತವಾಗಿ ಸೇತುವೆ ನಿರ್ಮಾಣ ಪೂರ್ಣಗೊಳಿಸಿ ಜನರ ಸಂಚಾರಕ್ಕೆ ಅನುಮತಿ ನೀಡಲಿದೆ ಎಂದು ಶುಭಹಾರೈಸಿದರು.
















ಹರೀಶ್ ಕಂಜಿಪಿಲಿ ಮಾತನಾಡಿ ” ಬಹು ಬೇಡಿಕೆಯ ಅರಮನೆಗಯ ಸೇತುವೆ ಈಗ ನಮ್ಮ ನಿಮ್ಮೆಲ್ಲರ ಪರಿಶ್ರಮದಿಂದ ನಿರ್ಮಾಣವಾಗುತ್ತಿದೆ . ಅದರಲ್ಲೂ ಸೇತುವೆ ನಿರ್ಮಾಣಕ್ಕೆ ಬಹು ವರ್ಷಗಳಿಂದ ಹೋರಾಡಿದ ನಮ್ಮ ಎಲ್ಯಣ್ಣ ಅರಮನೆಯವರ ಪರಿಶ್ರಮಕ್ಕೆ ಇಂದು ಶಾಶ್ವತ ಪರಿಹಾರ ಲಭಿಸಿದೆ. ಇಂದು ಶಾಸಕರು ಗುದ್ದಲಿಪೂಜೆ ನೆರವೇರಿಸಿ ಗ್ರಾಮಸ್ಥರ ಭರವಸೆಗೆ ಜೀವ ತುಂಬಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ವೆಂಕಟ್ ವಳಲಂಬೆ ,ಹರೀಶ್ ಕಂಜಿಪಿಲಿ, ಗೀತಾ ಹೊಸಳಿಕೆ, ಕೇಶವ ಅಡ್ತಲೆ, ಅರಂತೋಡು _ತೊಡಿಕಾನ ಪ್ರಾ. ಕೃ. ಪ.ಅಧ್ಯಕ್ಷ ಸಂತೋಷ್ ಕುತ್ತ ಮೊಟ್ಟೆ, ವಿನಯ್ ಮುಳುಗಾಡು ಮಾಜಿ ಗ್ರಾ.ಪಂ ಸದಸ್ಯ ಎಲ್ಯಣ್ಣ ಅರಮನೆಗಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಮುಖರಾದ ಸುಬೋದ್ ಶೆಟ್ಟಿ ಮೇನಾಲ, ವೆಂಕಟ್ ದಂಬೆಕೋಡಿ,, ದಯಾನಂದ ಕುರುಂಜಿ,ಗೋವಿಂದ ಅಳವುಪಾರೆ, ಶ್ರೀಕಾಂತ್ ಮಾವಿನಕಟ್ಟೆ , ಶಶಿಕಲಾ ನೀರಬಿದರೆ,ಕುಸುಮಾಧರ ಎ ಟಿ, ವಿನಯ ಕುಮಾರ್ ಕಂದಡ್ಕ, ಸತೀಶ್ ನಾಯ್ಕ್ , ಪ್ರದೀಪ್ ಮನವಳಿಕೆ , ಹೊನ್ನಪ್ಪ ಮಾಸ್ತರ್, ಎಂಜಿನಿಯರ್ ಗಳಾದ ಗೋಪಾಲ್ , ಪರಮೇಶ್ವರ,ಗುತ್ತಿಗೆದಾರ ಆಕಾಶ್ , ಜನಾರ್ಧನ ಮೇಲಡ್ತಲೆ, ಸ್ಪಂದನ ಗೆಳೆಯರ ಬಳಗ, ಚಂದನ ಯುವತಿ ಮಂಡಲ ಅಡ್ತಲೆ ಅಧ್ಯಕ್ಷರು ಪದಾಧಿಕಾರಿಗಳು, ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ತಿತರಿದ್ದರು.
ಅರಂತೋಡು ಗ್ರಾ.ಪಂ ಅಧ್ಯಕ್ಷ ಕೇಶವ ಅಡ್ತಲೆ ಸರ್ವರನ್ನು ಸ್ವಾಗತಿಸಿ , ಗೋವಿಂದ ಅಳವುಪಾರೆ ವಂದಿಸಿದರು.










