ರಸ್ತೆಯಲ್ಲಿ ಬಿದ್ದು ಸಿಕ್ಕ ಬೆಲೆ ಬಾಳುವ ಐಫೋನ್ 14 ಪ್ರೊ ಸುಮಾರು 70 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಫೋನನ್ನು ಸುಳ್ಯ ಪೊಲೀಸ್ ಠಾಣೆಗೆ ಒಪ್ಪಿಸುವ ಮೂಲಕ ಸುಳ್ಯದ ಜಯನಗರ ಯುವಕ ನವಾಜ್ ಪಂಡಿತ್ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
















ಅವರು ನ 11 ರಂದು ಬೆಳಿಗ್ಗೆ ಸುಮಾರು 11.30 ಕ್ಕೆ ಕೆಲಸದ ನಿಮಿತ್ತ ಬಲ್ಯದಿಂದ ನೆಲ್ಯಾಡಿಗೆ ಸಂಪರ್ಕಿಸುವ ಒಳಗಿನ ರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭ ಬಲ್ಯ ಸಮೀಪ ಸ್ಪೀಡ್ ಬ್ರೇಕರ್ ಬಳಿ ಈ ಫೋನ್ ಬಿದ್ದು ಸಿಕ್ಕಿರುತ್ತದೆ.
ಇದನ್ನು ಅವರು ಸುಳ್ಯ ಪೊಲೀಸ್ ಠಾಣೆಗೆ ಪ್ರಾಮಾಣಿಕತೆಯಿಂದ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಫೋನ್ ಕಳೆದುಕೊಂಡವರು ಅದರ ಪರಿಚಯ ನೀಡಿ ಸುಳ್ಯ ಪೊಲೀಸ್ ಠಾಣೆಯಿಂದ ಪಡೆದುಕೊಳ್ಳತಕ್ಕದ್ದು ಎಂದು ಸುಳ್ಯ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










