ಐವರ್ನಾಡು : ಅಪಘಾತದಲ್ಲಿ ಗಾಯಗೊಂಡಿದ್ದ ಹೋರಿ ಗೋಶಾಲೆಗೆ

0

ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಅಪಘಾತದಲ್ಲಿ ಗಾಯಗೊಂಡಿದ್ದ ಹೋರಿಯನ್ನು ರಾಮಕುಂಜ ಗೋಶಾಲೆ (ಆಶ್ರಮಕ್ಕೆ ) ತೆಗೆದುಕೊಂಡು ಹೋಗಲಾಯಿತು.
ನ.13 ರಂದು ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲೆಪ್ಪಾಡಿ ದರ್ಖಾಸ್ತು ಎಂಬಲ್ಲಿ ಅಪಘಾತದಿಂದ ಗಾಯಗೊಂಡ ಹೋರಿಯನ್ನು ಐವರ್ನಾಡು ಗ್ರಾಮ ಪಂಚಾಯತ್ ಘನತ್ಯಾಜ್ಯ ವಿಲೇವಾರಿ ವಾಹನದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮಸ್ಥರಾದ ಗಣೇಶ ಬಜಂತ್ತಡ್ಕ, ಬಾಲಕೃಷ್ಣ ದರ್ಖಾಸ್ತು, ನಾಗಪ್ಪ ಗೌಡ ಪಾಲೆಪ್ಪಾಡಿರವರ ಸಹಕಾರದೊಂದಿಗೆ ಕಡಬ ತಾಲೂಕು ರಾಮಕುಂಜ ಗೋಶಾಲೆ(ಆಶ್ರಮಕ್ಕೆ ) ಸಾಗಿಸಲಾಯಿತು.