ರಾಜ್ಯ ಮಟ್ಟದ ಕಿಶೋರ ಕನಕ ಕಾವ್ಯ ಗಮಕ ಸ್ಪರ್ಧೆಯಲ್ಲಿ ಸ್ವಸ್ತಿ ಎಂ. ಭಟ್ ಪ್ರಥಮ

0

ಸಂತ ಕವಿ ಕನಕದಾಸ ಮತ್ತು ತತ್ವ ಪದಕಾರ ಅಧ್ಯಯನ ಕೇಂದ್ರ – ಬೆಂಗಳೂರು ಇವರು ಏರ್ಪಡಿಸಿರುವ ರಾಜ್ಯ ಮಟ್ಟದ ಕಿಶೋರ ಕನಕ ಕಾವ್ಯ ಗಮಕ ಸ್ಪರ್ಧೆಯಲ್ಲಿ ಕೊಲ್ಲಮೊಗ್ರು ಕಟ್ಟದವರಾಗಿದ್ದು ಮಣಿಪಾಲದಲ್ಲಿ ನೆಲೆಸಿರುವ ಸ್ವಸ್ತಿ ಎಂ ಭಟ್ ಪ್ರಥಮ ಬಹುಮಾನ ಪಡೆದಿದ್ದಾರೆ.

ಬಹುಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ. 8 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಕನಕ ಜಯಂತಿಯ ಕನಕ ಗೌರವ ಕಾರ್ಯಕ್ರಮದಲ್ಲಿ ನೀಡಿದರು.

ಸ್ವಸ್ತಿ ಎಂ ಭಟ್ ಅವರು ಪ್ರಸ್ತುತ ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಎ. ಎಸ್. ಮುರುಳಿ, ಚೆನ್ನೈ, ವಿದುಷಿ ಉಮಾಶಂಕರಿ, ಹಾಗೂ ಶ್ರೀ ರಾಘವೇಂದ್ರ ಆಚಾರ್ಯ, ಮಣಿಪಾಲ ಇವರ ಬಳಿ ಕಲಿಯುತ್ತಿದ್ದಾರೆ. ಕೊಲ್ಲಮೊಗ್ರು ಗ್ರಾಮದ ಕಟ್ಟ ನಿವಾಸಿಯಾಗಿರುವ ಮಹಾಲಿಂಗ ಭಟ್ ಮತ್ತು ಪ್ರೇಮ ಭಟ್ ಅವರ ಮೊಮ್ಮಗಳಾಗಿದ್ದು, ಮಣಿಪಾಲ್ ಸ್ಕೂಲ್ ಆಫ್ ಇನ್ಫಾರ್ಮಶನ್ ಸೈನ್ಸಸ್ ಇದರಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ. ಮಧುಶಂಕರ್ ಹಾಗೂ ಉಮಾ ದಂಪತಿಗಳ ಪುತ್ರಿ,