ದಕ್ಷಿಣ ಭಾರತದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಿರಂತರ ಯೋಗ ಕೇಂದ್ರಕ್ಕೆ ನಾಲ್ಕು ಚಿನ್ನದ ಪದಕ

0

ಪ್ರಥಮ ವರ್ಷದ ದಕ್ಷಿಣ ಭಾರತದ ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯು ನ . ೦೯ ರದಂದು ಪತಂಜಲಿ ಯೋಗ ಕೇಂದ್ರ ಮತ್ತು ಸ್ನೇಹ ಸಂಗಮ ಯೋಗಾ ಬಳಗ ಬೆಂಗಳೂರು ಇವರು ವಿದ್ಯಾ ಸ್ಫೂರ್ತಿ ಇಂಟರ್ ನ್ಯಾಷನಲ್ ಅಕಾಡೆಮಿ ಬೆಂಗಳೂರುನಲ್ಲಿ ಆಯೋಜಿಸಲಾಗಿತ್ತು.


೦೮ ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ವಿಧ್ವತ್. ಎ. ಪಿ ಪ್ರಥಮ ಸ್ಥಾನ, ೦೮ ರಿಂದ ೧೨ ವರ್ಷದ ಬಾಲಕರ ವಿಭಾಗದಲ್ಲಿ ವಿಧತ್ ಗೌಡ. ಎಂ. ಟಿ. ಪ್ರಥಮ ಸ್ಥಾನ, ೧೨ ರಿಂದ ೧೫ ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ತನ್ವಿ ಅಂಚನ್ ಪ್ರಥಮ ಸ್ಥಾನ, ೧೫ ರಿಂದ ೨೦ ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಕ್ಷಮ, ಪ್ರಥಮ ಸ್ಥಾನ ಗಳಿಸಿದ್ದಾರೆ.
ನಿರಂತರ ಯೋಗ ಕೇಂದ್ರ ಸುಳ್ಯ ಇಲ್ಲಿಯ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.