ಅರಂತೋಡು : ವಾಹನ ಮಾಲಕ ಚಾಲಕ ಸಂಘದ ಸಭೆ ಮತ್ತು ನೂತನ ಸಮಿತಿ ಪದಗ್ರಹಣ

0


ಅರಂತೋಡು ವಾಹನ ಮಾಲಕ ಚಾಲಕ ಸಂಘದ ಮಹಾಸಭೆಯು ಆರಂತೋಡು ಗ್ರಾಮ ಪಂಚಾಯತ್‌ನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಜನಾರ್ಧನ ಇರ್ಣೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಂದಿನ ೩ವರ್ಷದ ಅವಧಿಗೆ ಅಧ್ಯಕ್ಷರಾಗಿ ಪ್ರಸನ್ನ ಕಲ್ಲಗದ್ದೆ, ಕಾರ್ಯದರ್ಶಿಯಾಗಿ ಗೋವರ್ಧನ ಇರ್ಣೆ, ಖಜಾಂಜಿಯಾಗಿ ಗೋವರ್ಧನ ಬೊಳ್ಳೂರು ಇವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದರು.