ಹಿಂದವಿ ಸಾಮ್ರಾಜ್ಯೋತ್ಸವಕ್ಕೆ ಸುಳ್ಯದಲ್ಲಿ ಪೂರ್ವಭಾವಿ ಸಭೆ
ಸಂಘ ಶತಾಬ್ದಿಯ ಅಂಗವಾಗಿ, ಲೋಕ ಕಲ್ಯಾಣಾರ್ಥವಾಗಿ ಶ್ರೀನಿವಾಸ ಕಲ್ಯಾಣೋತ್ಸವ- ಅರುಣ್ ಕುಮಾರ್ ಪುತ್ತಿಲ
ಸುಳ್ಯ ವಲಯ ಸಮಿತಿ ರಚನೆ :ಗೌರವಾಧ್ಯಕ್ಷ- ಪಿ.ಕೆ ಉಮೇಶ,ಅಧ್ಯಕ್ಷ- ಸುಧಾಕರ ಬೆಳ್ಳೂರು
ಪ್ರ. ಕಾರ್ಯದರ್ಶಿ -ಸಾತ್ವಿಕ್

ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಪುತ್ತೂರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ವತಿಯಿಂದ ನ. 29 ಮತ್ತು 30 ರಂದು ನಡೆಯಲಿರುವ 3 ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಹಾಗೂ ಹಿಂದವಿ ಸಾಮ್ರಾಜ್ಯೋತ್ಸವ ಕಾರ್ಯಕ್ರಮದ ಪೂರ್ವ ಭಾವಿ ಸಭೆಯು ನ. 14 ರಂದು ಸುಳ್ಯದ ಕಲ್ಕುಡ ದೈವಸ್ಥಾನದ ವಠಾರದಲ್ಲಿ ನಡೆಯಿತು.

ಪುತ್ತಿಲ ಪರಿವಾರ ಟ್ರಸ್ಟಿನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ರವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಕುರಿತು ಮಾತನಾಡಿ ” 3 ನೇ ವರ್ಷದ ಶ್ರೀನಿವಾಸಕಲ್ಯಾಣೋತ್ಸವದ ಪೂರ್ವಭಾವಿಯಾಗಿ 28 ರಂದು ಹೊರೆ ಕಾಣಿಕೆ ಸಮರ್ಪಣೆಯಾಗಲಿದೆ. ವಿಶೇಷವಾಗಿ ಸಾಮೂಹಿಕ ವಿವಾಹ ನಡೆಯಲಿದ್ದು ತಲಾ ಒಂದು ಜೋಡಿಗೆ 80 ಸಾವಿರದಷ್ಟು ವೆಚ್ಚವನ್ನು ಟ್ರಸ್ಟ್ ಭರಿಸುವುದು. ಈಗಾಗಲೇ 15 ಜೋಡಿ ನೋಂದಾಯಿಸಿದ್ದು ಸುಳ್ಯದಿಂದ ಜೋಡಿಗಳು ಇದ್ದಲ್ಲಿ ಅವಕಾಶವಿರುವುದು. ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು.
ಶ್ರೀದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರ ಶೋಭಾಯಾತ್ರೆ ಬೋಳುವಾ ರಿನಿಂದ ತ್ರಿನೇತ್ರ ಮಂಟಪಕ್ಕೆ ಆಗಮಿಸಿ ಬಳಿಕ
ಹಿಂದವಿಸಾಮ್ರಾಜ್ಯೋತ್ಸವದ ವೇದಿಕೆಯಲ್ಲಿ ಉಡುಪಿ ಮತ್ತು ದ. ಕ ಜಿಲ್ಲೆಯ 12 ಮಂದಿ ಸ್ವಾಮೀಜಿ ವರ್ಯರು ಉಪಸ್ಥಿತರಿದ್ದು ಹಿಂದೂ ಸಮಾಜಕ್ಕೆ ಜಾಗೃತಿಯ ಸಂದೇಶನೀಡಲಿದ್ದಾರೆ.















ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸರಳ ಜೀವನದ ಶಿಕ್ಷಣ ನೀಡಿದ ಸಂಘ ವಾಗಿದೆ. ಸಂಘ ಶತಾಬ್ದಿಯ ಹೊಸ್ತಿಲಲ್ಲಿ ಈ ಬಾರಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಹಿಂದೂ ಸಮಾಜಕ್ಕೆ ಆಗಿರುವ ಆತಂಕ ದೂರ ಮಾಡುವ ಸಲುವಾಗಿ
ಲೋಕಕಲ್ಯಾಣಾರ್ಥವಾಗಿ
ವೈಭವದ ಶ್ರೀನಿವಾಸ ಕಲ್ಯಾಣೋತ್ಸವವನ್ನು ಸಹಸ್ರ ಸಹಸ್ರ ಭಜಕರ ಭಜನಾ ಸಂಕೀರ್ತನೆಯ ಭಜನೊತ್ಸವ ದೊಂದಿಗೆಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಪ್ರಾಥ:ಕಾಲ
ಸುಪ್ರಭಾತಪೂಜಾಸೇವೆಯು ನಡೆಯಲಿರುವುದು ಎಂದು ವಿವರ ನೀಡಿದರು.

ವೇದಿಕೆಯಲ್ಲಿ ಕಲ್ಕುಡ
ದೈವಸ್ಥಾನದ ಧರ್ಮದರ್ಶಿ ಪಿ. ಕೆ ಉಮೇಶ, ಕಲ್ಯಾಣೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪ್ರಾಣೇಶ್ ಕೆಮ್ಮಾಯಿ, ಸಹ ಸಂಚಾಲಕ ಉಮೇಶ್ ಕೋಡಿಬೈಲ್, ಸ್ವಾಗತ ಸಮಿತಿ ಅಧ್ಯಕ್ಷ ಭೀಮಯ್ಯ ಭಟ್, ಜತೆ ಕಾರ್ಯದರ್ಶಿ ರಾಜು ಶೆಟ್ಟಿ, ಸಹ ಸಂಚಾಲಕ ರವಿಕುಮಾರ್ ರೈ, ಸಂಚಾಲಕ ಪ್ರಜ್ವಲ್ ಘಾಟೆ, ಸೋಮನಾಥ ಪೂಜಾರಿ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುಳ್ಯ ವಲಯ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರುಗಳಾಗಿ
ಪಿ. ಕೆ. ಉಮೇಶ, ಸೋಮನಾಥ ಪೂಜಾರಿ, ಅಧ್ಯಕ್ಷರಾಗಿ ಸುಧಾಕರ ಬೆಳ್ಳೂರು, ಪ್ರಧಾನ ಕಾರ್ಯದರ್ಶಿ ಸಾತ್ವಿಕ್, ಸಂತೋಷ್ ತೊಡಿಕಾನ, ಉಪಾಧ್ಯಕ್ಷರಾಗಿ ದೀಪಕ್ ಗೂನಡ್ಕ, ಸುಧೀರ್ ಉಗ್ರಾಣಿಮನೆ, ದಿತೇಶ್ ರಾವ್, ಮಹೇಶ್ ಉಗ್ರಾಣಿಮನೆ, ಮಹೇಶ್ ಮೇರ್ಕಜೆ, ಕಾರ್ಯದರ್ಶಿ ಅರುಣ್, ಆನಂದ ಕೋಲ್ಚಾರು, ಮನೋಜ್ ಪಾತಿಕಲ್ಲು ರವರನ್ನು ಆಯ್ಕೆ ಮಾಡಲಾಯಿತು.
ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಲಾಯಿತು.
ರವಿಕುಮಾರ್ ರೈ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ, ನಂದನ್ ವಂದಿಸಿದರು. ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ಹಾಗೂಪುತ್ತಿಲ ಪರಿವಾರದ ಸದಸ್ಯರು ಸಹಕರಿಸಿದರು.










