














ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಬೆಳ್ಳಾರೆ ಇದರ ಆಡಳಿತಕ್ಕೊಳಪಟ್ಟ ಶ್ರೀ ಸದಾಶಿವ ಶಿಶುಮಂದಿರದಲ್ಲಿ ಸುಮಚರಣಂ ನಾಟ್ಯಾಲಯ ಬೆಳ್ಳಾರೆ, ಅಂಕತ್ತಡ್ಕ, ಚಿತ್ಕಲಾ ಅರ್ಟ್ಸ್ ಪನ್ನೆ, ಬೆಳ್ಳಾರೆ ಮತ್ತು ಗಾನಕೀರ್ತನ ಸಂಗೀತ ಶಾಲೆ ಬೆಳ್ಳಾರೆ ಇವರ ಸಹಭಾಗಿತ್ವದಲ್ಲಿ ಮಕ್ಕಳ ಮನೋವಿಕಾಸಕ್ಕಾಗಿ
ವಿದ್ಯಾರ್ಥಿಗಳಿಗೆ ಸಂಸ್ಕಾರ ಭಾರತೀ ಹಾಗೂ ಸ್ಪರ್ಧಾ ಕಾರ್ಯಕ್ರಮ ನ. 16ರಂದು ಶರತ್ ಜೋಶಿ ಸಭಾಭವನದಲ್ಲಿ ಬೆಳಿಗ್ಗೆ 9-30 ರಿಂದ 12-30ರ ತನಕ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿ ವಹಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ರೋಟರಿ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಭಾಗವಹಿಸಲಿದ್ದಾರೆ. ಸುಮಚರಣಂ ನಾಟ್ಯಾಲಯದ ನಿರ್ದೇಶಕಿ ವಿದುಷಿ ಸುರಕ್ಷಾ ಕೆ. ಆರ್, ಬೆಳ್ಳಾರೆ ಚಿತ್ಕಲಾ ಆರ್ಟ್ಸ್ ನಿರ್ದೇಶಕಿ ಶ್ರೀಮತಿ ಶಮಿತಾ ಪಿ. ರೈ ಪನ್ನೆ, ಗಾನಕೀರ್ತನಾ ಸಂಗೀತ ಶಾಲೆಯ ನಿರ್ದೇಶಕಿ ವಿದುಷಿ ಮಾಲಿನಿ ಕೃಷ್ಣ ಮೋಹನ್ ಮತ್ತು ಶ್ರೀ ಸದಾಶಿವ ಶಿಶುಮಂದಿರ ಮಾತಾಜಿ ಶ್ರೀಮತಿ ತೇಜೇಶ್ವರಿ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ.










