ನೆಲ್ಲೂರು ಕೆಮ್ರಾಜೆ ಪ್ರಾ. ಕೃ. ಪ. ಸ. ಸಂಘದಲ್ಲಿ 2026ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಮತ್ತು ಸಹಕಾರಿ ಸಪ್ತಾಹ ಆಚರಣೆ ಸೊಸೈಟಿ ಆವರಣದಲ್ಲಿ ನಡೆಯಿತು.















ಸೊಸೈಟಿ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ಸಹಕಾರಿ ಧ್ವಜ ಹಾರಿಸುವುದರ ಮೂಲಕ ಸಹಕಾರಿ ಸಪ್ತಾಹ ಆಚರಿಸಿದರು. ಇದೇ ಸಂದರ್ಭ 2026ರ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜಯಪ್ರಸಾದ್ ಸುಳ್ಳಿ, ನಿರ್ದೇಶಕರಾದ ಉಮೇಶ್ ಪ್ರಭು, ದೇವಿಪ್ರಸಾದ್ ಸುಳ್ಳಿ, ಶುಭಾಕರ ನಾಯಕ್ ಬೊಳ್ಳಾಜೆ, ಸತ್ಯೇಶ್ ಚಂದ್ರೋಡಿ, ವಿನಯಚಂದ್ರ ಸುಳ್ಳಿ, ಇಂದಿರಾ ಎರ್ಮೆಟ್ಟಿ, ಸಂಧ್ಯಾ ಪುನುಕುಟ್ಟಿ, ಮುಖ್ಯ ಕಾರ್ಯನಿರ್ವಾಹಣಧಿಕಾರಿ ಸಂತೋಷ್ ಎನ್. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.










