ಇರುವಂಬಳ್ಳ ಶಾಲೆಯಲ್ಲಿ ಅಕ್ಷರದಾಸೋಹ‌ ಕೊಠಡಿ ಉದ್ಘಾಟನೆ

0

ಮಂಡೆಕೋಲು ಗ್ರಾಮದ ಇರುವಂಬಳ್ಳ ಶಾಲೆಯಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಿಸಲಾಗಿರುವ ಅಕ್ಷರ ದಾಸೋಹ ಕೊಠಡಿ‌ ಉದ್ಘಾಟನೆ ನ.14ರಂದು‌ ನಡೆಯಿತು.

ನೂತನ ಕೊಠಡಿಯನ್ನು ಉದ್ಘಾಟಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಶಿಕ್ಷಣ ಸಂಯೋಜಕಿ ಧನಲಕ್ಷ್ಮಿ ಕುದ್ಪಾಜೆ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಅಬೂಬಕರ್ ಇರುವಂಬಳ್ಳ,
ವಾರ್ಡ್ ಸದಸ್ಯರಾದ ತಿಲಕ ಕುತ್ಯಾಡಿ, ತಾರಾನಾಥ ಕೊಡೆಂಚಿಕಾರ್, ಬಾಲಚಂದ್ರ ದೇವರಗುಂಡ ಮೊದಲಾದವರಿದ್ದರು.

ಕಾರ್ಯಕ್ರಮ ದಲ್ಲಿ ಮಂಡೆಕೋಲು ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ರಾಮಕೃಷ್ಣ ರೈ, ಎಸ್.ಡಿ.ಎಂ.ಸಿ ಸದಸ್ಯರು, ಮಕ್ಕಳ ಪೋಷಕರು ಊರಿನ ಗಣ್ಯರು ಅಂಗನವಾಡಿ ಕಾರ್ಯಕರ್ತೆ ಭಾಗವಹಿಸಿದರು.

ನರೇಗಾ ಇಂಜಿನಿಯರ್ ಸುಧಾನ್ ಕೃಷ್ಣ ಪ್ರಾಸ್ತಾವಿಕ ಮಾತನಾಡಿದರು. ಪಿಡಿಒ ರಮೇಶ್ ಸ್ವಾಗತಿಸಿ ವಂದಿಸಿದರು. ಶಾಲಾ ಮುಖ್ಯೋಪಾಧ್ಯರಾದ ಶ್ರೀಮತಿ ಉದಯ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.