ಗಾಳಿಬೀಡು – ಕಡಮಕಲ್ – ಕುಕ್ಕೆ ಸುಬ್ರಹ್ಮಣ್ಯ ರಸ್ತೆ ಬಗ್ಗೆ ಗ್ರಾಮಸ್ಥರೊಂದಿಗೆ ಸಮಾಲೋಚನೆ
ಮುಂದಿನ ಬಜೆಟ್ ನಲ್ಲಿ ಅನುದಾನ ಇರಿಸಲು ಪಯತ್ನಿಸುವೆ: ಮಂತರ್ ಗೌಡ

ಬಹು ಬೇಡಿಕೆಯ, ಮಡಿಕೇರಿ – ಗಾಳಿಬೀಡು – ಕಡಮಕಲ್ – ಕುಕ್ಕೇ ಸುಬ್ರಹ್ಮಣ್ಯ ರಸ್ತೆಯ ಬಗ್ಗೆ ಮತ್ತು ಕಡಮಕಲ್ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಹಿನ್ನೆಲೆಯಲ್ಲಿ
ಸಮಾಲೋಚನಾ ಸಭೆಯನ್ನು ಮಡಿಕೇರಿ ಶಾಸಕ ಮಂತರ್ ಗೌಡ
ನ. 14ರಂದು ಸಂಜೆ ಕಡಮಕಲ್ ನಲ್ಲಿ ನಡೆಸಿದರು.
















ನೂರಾರು ಸಂಖ್ಯೆಯಲ್ಲಿ ಸೇರಿದ ಸ್ಥಳೀಯರು ಮತ್ತು
ಗುತ್ತಿಗಾರು, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು ಗ್ರಾಮದ ನಾಯಕರು, ಗ್ರಾಮಸ್ಥರು ಮಡಿಕೇರಿ,ಗಾಳಿಬೀಡು, ಕಡಮಕಲ್ ಕುಕ್ಕೇ ಸುಬ್ರಹ್ಮಣ್ಯ ರಸ್ತೆಯ ಅಗತ್ಯತೆ ಮತ್ತು ಕಾನೂನು ತೋಡಕುಗಳನ್ನು ನಿವಾರಿಸಿ ದಶಕಗಳ ಬೇಡಿಕೆಯನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಸ್ಥಳೀಯ ನಿವಾಸಿಗಳಿಗೆ ಹಕ್ಕುಪತ್ರ, ಕುಡಿಯುವ ನೀರು, ಮೊಬೈಲ್ ಟವರ್ ನಿರ್ಮಾಣ, ರಸ್ತೆ ಅಭಿವೃದ್ಧಿ ಬಗ್ಗೆ ತುರ್ತಾಗಿ ಕ್ರಮ ಕೈಗೊಲ್ಲುವುದಾಗಿ ತಿಳಿಸಿದರು. ಮಡಿಕೇರಿ – ಗಾಳಿಬೀಡು – ಕಡಮಕಲ್ – ಸಂಪರ್ಕ ರಸ್ತೆಗೆ ಇರುವ ಕಾನೂನು ತೋಡಕುಗಳನ್ನು ನಿವಾರಿಸಿ ಸರಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರ ಮುಂದಿನ ಬಜೆಟ್ ನಲ್ಲಿ ಅನುದಾನ ಇರಿಸುವ ಬಗ್ಗೆ ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ. ಅಲ್ಲದೆ ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸುವ ಕುರಿತಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ್ ಕಲ್ಮಡ್ಕ, ಪ್ರವೀಣ್ ಮುಂಡೋಡಿ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಮಡಿಕೇರಿ ಅಕ್ರಮ ಸಕ್ರಮ ಸಮಿತಿ ಸದಸ್ಯ ಕೆ.ಕೆ ಹರಿಪ್ರಸಾದ್, ಪುಷ್ಪ ಪೂನಾಚ್ಚ, ತೆಣ್ಣೀರ ಮೈನಾ, ಸೇರಿದಂತೆ ಮಡಿಕೇರಿಯ ಮುಖಂಡರು, ಸ್ಥಳೀಯರಾದ ಭವಾನಿಶಂಕರ್ ಪಿಂಡಿಮನೆ, ಸೋಮಶೇಖರ್ ಕಡಮಕಲ್, ಗಣೇಶ್ ಭಟ್ ಇಡ್ಯಡ್ಕ, ಡ್ಯಾನಿ ಯಲದಾಳು, ಶೇಖರ್ ಅಂಬೆಕಲ್ಲು, ನರೇಂದ್ರ ಬಿಳಿಮಲೆ, ಗುರು ಚರಣ್ ಕೊಪ್ಪಡ್ಕ, ವೀಣಾನಂದ ಬಿಳಿಮಲೆ, ದಿನೇ ಕುಮಾರ್ ಮಡ್ತಿಲ, ಸತೀಶ್ ಕೊಮ್ಮೆಮನೆ, ಶರತ್ ಕಡಮಕಲ್, ರವಿಕುಮಾರ್ ಕಿರಿಭಾಗ, ಮಂಜುನಾಥ್ ಮಡ್ತಿಲ, ರವೀಂದ್ರ ರುದ್ರಪಾದ, ರಾಮಕೃಷ್ಣ ಹರಿಹರ, ದ ಕಮಲಾಕ್ಷ ಕೊಲ್ಲಮೊಗ್ರು,, ಪವನ್ ಕೋನಡ್ಕ, ಪರಮೇಶ್ವರ್ ಕೆಂಬಾರೆ, ರಂಜಿತ್ ಪೈಕ, ಪರಮೇಶ್ವರ್ ನಾಯ್ಕ ಚಣಿಲ ಮೊದಲಾದವರು ಉಪಸ್ಥಿತರಿದ್ದರು.










