ಜತ್ತಪ್ಪ ಕೆ.ಪಡ್ಪುರವರಿಗೆ ಶ್ರದ್ಧಾಂಜಲಿ – ವೈಕುಂಠ ಸಮಾರಾಧನೆ

0

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಉದ್ಯೋಗಿ ಜತ್ತಪ್ಪ ಕೆ.ಪಡ್ಪುರವರು ನ.2 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಹಾಗೂ ವೈಕುಂಠ ಸಮಾರಾಧನೆಯು ನ.12 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭನದಲ್ಲಿ ನಡೆಯಿತು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ಬ,ಬೆಳ್ಳಾರೆ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶ್ರೀರಾಮ ಪಾಟಾಜೆ,ಸಂಘದ ನಿರ್ದೇಶಕರಾದ ಐತ್ತಪ್ಪ ರೈ ಅಜ್ರಂಗಳ,ನಾರಾಯಣ ಕೊಂಡೆಪ್ಪಾಡಿಯವರು ದಿ.ಜತ್ತಪ್ಪ ಪಡ್ಪುರವರ ಅದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನ ಗಣ್ಯರು ದಿ.ಜತ್ತಪ್ಪರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.


ಈ ಸಂದರ್ಭದಲ್ಲಿ ಪತ್ನಿ ಶ್ರೀಮತಿ ಲಲಿತಾ ಮೂಲ್ಯ,ಪುತ್ರ ಚೇತನ್,ಪುತ್ರಿಯರಾದ ಶ್ರೀಮತಿ ಚೈತ್ರ ಶಿವಪ್ರಸಾದ್ ,ಶ್ರೀಮತಿ ಚೈತನ್ಯ ರಾಜೇಶ್,ಅಳಿಯಂದಿರು,ಮೊಮ್ಮಕ್ಕಳು,ಕುಟುಂಬಸ್ಥರು ಉಪಸ್ಥಿತರಿದ್ದರು.