ನ. 16 ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣಾ ವಾಹನಗಳ ಏಲಂ

0

ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ವಿಲೇವಾರಿಯಾಗದೇ ಬಾಕಿಯಾದ ೯ ವಾಹನಗಳನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ನ್ಯಾಯಾಲಯದಿಂದ ಅನುಮತಿ ಪಡೆದಿದ್ದು, ಅದರಂತೆ ಸದ್ರಿ ವಾಹನಗಳನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ವಠಾರದಲ್ಲಿ ನ. ೧೬ರಂದು ಪೂ. ೯ ಗಂಟೆಗೆ ಹರಾಜು ಮಾಡಲಾಗುವುದು. ಆದ್ದರಿಂದ ಆಸಕ್ತರು ಈ ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದೆಂದು ಸುಬ್ರಹ್ಮಣ್ಯ ಠಾಣಾಧಿಕಾರಿಗಳು ತಿಳಿಸಿದ್ದಾರೆ.