ನಾಳೆ (ನ.16) ವಳಲಂಬೆಯಲ್ಲಿ ಪಂಜ ಹೋಬಳಿ ಸಾಹಿತ್ಯ ಸಮ್ಮೇಳನ

0

ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು, ಪಂಜ ಹೋಬಳಿ ಘಟಕ, ಪಂಜ ಹೋಬಳಿ ಸಾಹಿತ್ಯ ಸಮ್ಮೇಳನ ಸಂಘಟನಾ ಸಮಿತಿಯ ಆಶ್ರಯದಲ್ಲಿ
ಪಂಜ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ ನ.16 ರಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವಠಾರದ ನಡೆಯಲಿದೆ.
ಯು. ಸು. ಗೌಡ ಸಭಾಂಗಣದಲ್ಲಿ ಸರೋಜಿನಿ ಗಂಗಯ್ಯ ಮುಳುಗಾಡು ವೇದಿಕೆ ಯಲ್ಲಿ ನಡೆಯಲಿದೆ. ಹೊಸೋಳಿಕೆ ಬಾಲಕೃಷ್ಣ ಮಾಸ್ತರ್ ದ್ವಾರ ಇರಲಿದೆ.

ಸಾಹಿತಿ ಎ. ಕೆ. ಹಿಮಕರ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ.
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಅಧ್ಯಕ್ಷ ಬಿ.ಕೆ ಬೆಳ್ಯಪ್ಪ ಗೌಡ ಕಡ್ತಲ್ ಕಜೆ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಳಿಕ ಸುಳ್ಯ ವಿಧಾನ ಸಭಾ ಸದಸ್ಯೆ ಭಾಗೀರಥಿ ಮುರುಳ್ಯ ರಾಷ್ಟ್ರ ಧ್ವಜ ಧ್ವಜಾರೋಹಣ ಮಾಡಲಿದ್ದಾರೆ.
ಜಿಲ್ಲಾ ಕಸಾಪ ಅಧ್ಯಕ್ಷ ಡಾl ಎಂ.ಪಿ ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ ಮಾಡಲಿದ್ದಾರೆ. ಕಸಾಪ ಸುಳ್ಯ ಇದರ ಅಧ್ಯಕ್ಷ ಚಂದ್ರಶೇಖರ ಪೇರಾಲು ಕನ್ನಡ ಧ್ವಜಾರೋಹಣ ಮಾಡಲಿದ್ದಾರೆ.

ಸಾಹಿತಿ ಎ.ಕೆ ಹಿಮಕರ ಅವರ ಅಧ್ಯಕ್ಷತೆಯಲ್ಲಿ ಪಂಜ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಪಾಂಪೈ ಕಾಲೇಜು ಕಿನ್ನಿಗೋಳಿ ಪ್ರಾಂಶುಪಾಲ, ಸಾಹಿತಿ ಪುರುಷೋತ್ತಮ ಕರಂಗಲ್ಲು ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ.
ಹೊಸ ಕೃತಿ ಬಿಡುಗಡೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಮಾಡಲಿದ್ದಾರೆ.
ದ. ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ| ಎಂ. ಪಿ. ಶ್ರೀನಾಥ್, ಕಸಾಪ ಸುಳ್ಯ ಇದರ ಅಧ್ಯಕ್ಷ ಚಂದ್ರಶೇಖರ ಪೇರಾಲು ಆಶಯ ನುಡಿ ನುಡಿಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸದಾನಂದ ಮಾವಜಿ, ಶ್ರೀಮತಿ ಸುಮಿತ್ರಾ ಮೂಕಮಲೆ,
ಮಿತ್ರದೇವ ಮಡಪ್ಪಾಡಿ ಭಾಗವಹಿಸಲಿದ್ದಾರೆ. ಮಹೇಶ ಪುಚ್ಚಪ್ಪಾಡಿ ಅವರ “ಸಂತೆಯಲ್ಲಿ ಸಾಗುತ್ತಿರುವ ನಾವು” ಕೃತಿ ಬಿಡುಗಡೆ ಗೊಳ್ಳಲಿದೆ. ಮಧ್ಯಾಹ್ನ 12 ಕ್ಕೆ ವಿಚಾರ ಗೋಷ್ಠಿ ನಡೆಯಲಿದ್ದು ಬಾಳಿಲ ವಿದ್ಯಾಭೋಧಿನಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶಿವರಾಮ ಶಾಸ್ತ್ರೀ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ಕೆ ವಿಶುಕುಮಾರ್ “ಕೃಷಿ ಸಮಸ್ಯೆಗಳು ಮತ್ತು ಪರಿಹಾರಗಳು” ವಿಚಾರವಾಗಿ ಉಪನ್ಯಾಸ ನೀಡಲಿದ್ದಾರೆ. “ಧರ್ಮ ಮತ್ತು ಸಾಹಿತ್ಯ” ದ ಬಗ್ಗೆ ಧೀರೇನ್ ಪರಮಲೆ ಉಪನ್ಯಾಸ ನೀಡಲಿದ್ದಾರೆ. ಅಪರಾಹ್ನ 1 ಗಂಟೆಯಿಂದ ಗೀತ ಗಾಯನ ನಡೆಯಲಿದೆ.ಎರಡು ಗಂಟೆ ಬಳಿಕ ವಿದ್ಯಾರ್ಥಿ ಕವಿಗೋಷ್ಠಿ ನಡೆಯಲಿದೆ. ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಧೃತಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 3ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ಜಿಲ್ಲಾ ಕಸಾಪ ಅಧ್ಯಕ್ಷ ಡಾl ಎಂ.ಪಿ‌ ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ ಸಮಾರೋಪ ಭಾಷಣ ಮಾಡಲಿದ್ದಾರೆ. ಬಳಿಕ ನಿತ್ಯಾನಂದ ಮುಂಡೋಡಿ, ಚಂದ್ರಶೇಖರ ತಳೂರು ವಿವಿಧ ಸಾಧಕರನ್ನು ಸನ್ಮಾನಿಸಲಿದ್ಧಾರೆ. ಇಡೀ ದಿವಸ ವಳಲಂಬೆಯಲ್ಲಿ ಅಕ್ಷರ ಜಾತ್ರೆ ನಡೆಯಲಿದೆ.