ಸುಳ್ಯ : ವಿದ್ಯುತ್ ಮೊತ್ತವನ್ನು ಪಾವತಿಸಲು ಮೆಸ್ಕಾಂ ಇಲಾಖೆ ವತಿಯಿಂದ ಗ್ರಾಹಕರಲ್ಲಿ ಮನವಿ

0

ವಿಶೇಷ ಕಂದಾಯ ವಸೂಲತಿ

ಮಳೆಗಾಲ ಕಳೆದು ಬೇಸಿಗೆ ಪ್ರಾರಂಭವಾಗಿದ್ದು ವಿದ್ಯುತ್ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಬೇಡಿಕೆಗೆ ತಕ್ಕ ವಿದ್ಯುತ್ತನ್ನು ಗುಣಮಟ್ಟದಿಂದ ನಿರಂತರವಾಗಿ ಗ್ರಾಹಕರುಗಳಿಗೆ ಪೂರೈಸುವುದೇ ಮೆಸ್ಕಾಂ ನ ದ್ಯೇಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಈಗಾಗಲೇ ಹಲವಾರು ವ್ಯವಸ್ಥೆ ಸುಧಾರಣಾ ಕಾಮಗಾರಿಗಳನ್ನು ಸಮಾರೋಪಾಧಿಯಲ್ಲಿ ಕೈಗೆತ್ತಿ ಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ.

ಅಲ್ಲದೇ ಜೊತೆ ಜೊತೆಗೆ ವಿದ್ಯುತ್ ಖರೀದಿ ಹಾಗೂ ನಿರ್ವಹಣಾ ವೆಚ್ಚಗಳನ್ನು ಕಾಲಕಾಲಕ್ಕೆ ಪೂರೈಸಬೇಕಾಗಿರುತ್ತದೆ. ಅದ್ದುದರಿಂದ ಮೆಸ್ಕಾಂನ ಎಲ್ಲಾ ಗ್ರಾಹಕರುಗಳು ತಮ್ಮ ತಮ್ಮ ವಿದ್ಯುತ್ ಸ್ಥಾವರಗಳ ವಿದ್ಯುತ್ ಬಾಕಿ ಬಿಲ್ಲುಗಳನ್ನು(REVENUE) ಹಾಗೂ ಈಗಾಗಲೇ ಬೇಡಿಕೆ ಮಾಡಲಾಗಿರುವ ಅಧಿಕ ಭದ್ರತಾ ಠೇವಣಿ(DEPOSIT) ಮೊತ್ತಗಳನ್ನು ನಿಗದಿತ ಅವಧಿಯ ಒಳಗಾಗಿ ಪಾವತಿಸಿ ಅನಗತ್ಯ ವಿದ್ಯುತ್ ಕಡಿತಗೊಳ್ಳುವುದನ್ನು ತಪ್ಪಿಸಿ ಮೆಸ್ಕಾಂ ನೊಂದಿಗೆ ಸಹಕರಿಸುವಂತೆ ಸುಳ್ಯ ಮೆಸ್ಕಾಂ ಇಲಾಖೆ ಗ್ರಾಹಕರಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದೆ.