
ಶ್ರೀ ಸದಾಶಿವ ಶಿಶು ಮಂದಿರ ಬೆಳ್ಳಾರೆ ಆಶ್ರಯದಲ್ಲಿ ಸುಮಚರಣಂ ನಾಟ್ಯಾಲಯ ಬೆಳ್ಳಾರೆ – ಅಂಕತ್ತಡ್ಕ,ಚಿತ್ಕಲಾ ಆರ್ಟ್ಸ್ ಪನ್ನೆ ಬೆಳ್ಳಾರೆ ಮತ್ತು ಗಾನ ಕೀರ್ತನ ಸಂಗೀತ ಶಾಲೆ ಬೆಳ್ಳಾರೆ ಇದರ ಸಹಭಾಗಿತ್ವದಲ್ಲಿ ಮಕ್ಕಳ ಮನೋವಿಕಾಸಕ್ಕಾಗಿ ವಿದ್ಯಾರ್ಥಿಗಳಿಗೆ ಸಂಸ್ಕಾರ ಭಾರತೀ ಹಾಗೂ ಸ್ಪರ್ಧಾ ಕಾರ್ಯಕ್ರಮವು ನ. 16 ರಂದು ಶರತ್ ಜೋಶಿ ಸಭಾಭವನ, ಶ್ರೀ ಸದಾಶಿವ ಶಿಶು ಮಂದಿರದಲ್ಲಿ ಜರಗಿತು.
















ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ,ಶಿಕ್ಷಕಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸುಳ್ಯ ಇವರು ಮಾತನಾಡಿ ಮಕ್ಕಳಿಗೆ ಸರಿಯಾದ ಸಂಸ್ಕಾರ ನೀಡಿದರೆ, ಗುರುಹಿರಿಯರಿಗೆ ಗೌರವಿಸುವ ರೀತಿ ನೀತಿ ಯೊಂದಿಗೆ ಮುಂದಿನ ಜೀವನದ ಪಾಠದ ಅರಿವಿರುತ್ತದೆ.ಮಕ್ಕಳನ್ನು ಎಳವೆಯಲ್ಲಿ ತಿದ್ದುವ ಕಾರ್ಯ ಪ್ರತಿ ಮನೆಯಿಂದಲೇ ನಡೆಯ ಬೇಕಿದೆ ಎಂದರು.
ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಬೆಳ್ಳಾರೆ ಇದರ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿ, ಅಧ್ಯಕ್ಷತೆ ವಹಿಸಿ,ಸ್ವಾಗತಿಸಿ ಪ್ರಸ್ತಾವನೆ ಗೈದರು. ವೇದಿಕೆಯಲ್ಲಿ ಸುಮಚರಣಂ ನಾಟ್ಯಾಲಯ ದ ನಿರ್ದೇಶಕಿ ವಿದುಷಿ ಸುರಕ್ಷಾ ಕೆ ಆರ್, ಚಿತ್ಕಲಾ ಆರ್ಟ್ಸ್ ಪನ್ನೆ, ಬೆಳ್ಳಾರೆಯ ನಿರ್ದೇಶಕಿ ಶಮಿತಾ ಪಿ ರೈ ಹಾಗೂ ಗಾನ ಕೀರ್ತನಾ ಸಂಗೀತ ಶಾಲೆ, ಬೆಳ್ಳಾರೆಯ ನಿರ್ದೇಶಕಿ,ವಿದುಷಿ ಮಾಲಿನಿ ಕೃಷ್ಣ ಮೋಹನ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ವಿದ್ಯಾರ್ಥಿಗಳಿಗೆ, ವಿವಿಧ ಸ್ಪರ್ಧಾ ಕೂಟವನ್ನು ಆಯೋಜಿಸಿ, ಬಹುಮಾನ ವಿತರಣೆ ಗೊಳಿಸಲಾಯಿತು ಹಾಗೂ ಸಂಸ್ಥೆಯ ಮುಖೇನ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಗೈಯ್ಯಲಾಯಿತು.

ಶ್ರೀ ಸದಾಶಿವ ಶಿಶುಮಂದಿರದ ಮಾತಾಜಿ ತೇಜೇಶ್ವರಿ ಕಾರ್ಯಕ್ರಮವನ್ನು ನಿರೂಪಿಸಿ,ವಂದನಾರ್ಪಣೆ ಗೈದರು.ಸುಮಾರು 60 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.










