ಆಲ್ ಕಾಲೇಜ್ ಸ್ಟುಡೆಂಟ್ ಯೂನಿಯನ್ 2025-26 ಅಧ್ಯಕ್ಷರಾಗಿ ಎ.ಬಿ.ವಿ.ಪಿ ಬೆಂಬಲಿತ ಮುಳಿಯ ಸಾತ್ವಿಕ್ ಆಯ್ಕೆ

0

ಮಂಗಳೂರು ವಿಭಾಗದ ಎ.ಬಿ.ವಿ.ಪಿ ಬೆಂಬಲಿತ ಆಲ್ ಕಾಲೇಜ್ ಸ್ಟುಡೆಂಟ್ ಯೂನಿಯನ್ 2025-26 ಅಧ್ಯಕ್ಷರಾಗಿ ಮುಳಿಯ ಸಾತ್ವಿಕ್ ಆಯ್ಕೆಯಾಗಿದ್ದಾರೆ.

ಮಂಗಳೂರು ವಿಭಾಗವು ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಈ ಮೂರು ಜಿಲ್ಲೆಗಳನ್ನೊಳಗೊಂಡ ದೊಡ್ಡ ಶೈಕ್ಷಣಿಕ ವಲಯವಾಗಿದ್ದು, ಸ್ವಸ್ತಿಕ್ ಅವರು ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ಸ್ಟುಡೆಂಟ್ ಫೋರಂ ಅಧ್ಯಕ್ಷರೂ ಆಗಿ ಕೆಲಸ ನಿರ್ವಹಿಸುತಿದ್ದಾರೆ.

ಇವರು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ, ಕೇಂದ್ರ ಸರ್ಕಾರದ ರಬ್ಬರ್ ಬೋರ್ಡ್ ಸದಸ್ಯ ಮುಳಿಯ ಕೇಶವ ಭಟ್ ಮತ್ತು ಪಲ್ಲವಿ ದಂಪತಿಗಳ ಪುತ್ರ.