ಸಂಪಾಜೆ ಗ್ರಾ.ಪಂ. ಅಧ್ಯಕ್ಷರು, ಸದಸ್ಯರ ಪತ್ರಿಕಾಗೋಷ್ಠಿ
ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳಲ್ಲಿ 15 ಕೋಟಿ ರೂ ಅನುದಾನದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಲಾಗಿದೆ” ಎಂದು ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಹಾಗೂ ಹಾಲಿ ಅಧ್ಯಕ್ಷೆ ಸುಮತಿ ಶಕ್ತಿವೇಲು, ಉಪಾಧ್ಯಕ್ಷರಾದ ಎಸ್.ಕೆ. ಹನೀಫ್, ಸದಸ್ಯರುಗಳಾದ ಸುಂದರಿ ಮುಂಡಡ್ಕ, ವಿಮಲ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ನ.18ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ಮಾಹಿತಿ ನೀಡಿದರು. “ಗ್ರಾಮ ಪಂಚಾಯತ್ನ ಸ್ವಂತ ನಿಧಿ, 15ನೇ ಹಣಕಾಸು ಆರೋಗ್ಯಕರ, ವಿವಿಧ ಯೋಜನೆಗಳ ಜತೆಗೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಶಾಸಕರ ನಿಧಿ, ವಿಧಾನ ಪರಿಷತ್ ಸದಸ್ಯರ ನಿಧಿ, ಹಾಗೂ ವಿಶೇಷವಾಗಿ ಕರ್ನಾಟಕ ಸರಕಾರ ಕಾರ್ಮಿಕ ವೇತನ ಪರಿಷ್ಕರಣೆ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ.ಶಹೀದ್ರವರ ವಿಶೇಷ ಪ್ರಯತ್ನದಿಂದ ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್ರವರ ಅನುದಾನದಲ್ಲಿ 4 ಸೋಲಾರ್ ಹೈಮಾಸ್ಕ್ ದೀಪ, ಸಂಪಾಜೆ ಗಡಿಕಲ್ಲು ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಅನುದಾನ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್ರವರ ಅನುದಾನದಲ್ಲಿ ದರ್ಖಾಸ್ತು ಅಂಗನವಾಡಿ ಕಟ್ಟಡಕ್ಕೆ ಆವರಣ ಗೋಡೆ, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಅನುದಾನದಲ್ಲಿ ದರ್ಖಾಸ್ತು ಗುಡ್ಡೆ ರಸ್ತೆ ಕಾಂಕ್ರೀಟಿಕರಣ ಪ್ರಸ್ತುತ ವರ್ಷ ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ 50-54 ಅನುದಾನದಲ್ಲಿ ದರ್ಖಾಸ್ತು ಕೊಪ್ಪದಕಜೆ ರಸ್ತೆ ಕಾಂಕ್ರೀಟಿಕರಣ, ಮುಂಡಡ್ಕ ರಸ್ತೆ ಕಾಂಕ್ರೀಟಿಕರಣ. ಚಟ್ಟೆಕಲ್ಲು ರಸ್ತೆ ಕಾಂಕ್ರೀಟಿಕರಣ, ದಂಡೆಕಜೆ ರಸ್ತೆ ಕಾಂಕ್ರೀಟಿಕರಣ, ಪೆರುಂಗೊಡಿ ರಸ್ತೆ ಕಾಂಕ್ರೀಟಿಕರಣಕ್ಕೆ ರೂ. 1 ಕೋಟಿ ಅನುದಾನ ಮಂಜೂರಾತಿ ಟೆಂಡರ್ ಆಗಿದ್ದು, ಕಾಮಗಾರಿ ಶೀಘ್ರ ಅನುಷ್ಠಾನಗೊಳ್ಳಲಿದೆ ಎಂದು ವಿವರ ನೀಡಿದರು.
ಅಲ್ಲದೆ ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರ ವಿಶೇಷ ಅನುದಾನದಲ್ಲಿ ಚಟ್ಟೆಕಲ್ಲು ರಸ್ತೆಗೆ 5 ಲಕ್ಷ ಹಾಗೂ ಕಡೆಪಾಲ ಕುಯಿಂತೋಡು ರಸ್ತೆಗೆ 5ಲಕ್ಷ ರೂ ನೀದಿದ್ದು ಕಾಂಕ್ರೀಟ್ ಕಾಮಗಾರಿ ಮುಕ್ತಾಯಗೊಂಡಿದ್ದು, ಪ್ರಸ್ತುತ ಅವರ ವಿಶೇಷ ಅನುದಾನದಲ್ಲಿ ದಂಡೆಕಜೆ ರಸ್ತೆ ಕಾಂಕ್ರೀಟಿಕರಣ, ರಾಜರಾಂಪುರ ಗೂನಡ್ಕ ಶಾಲಾ ಬಳಿ ಶೌಚಾಲಯ ರಚನೆ, ಹಾಗೂ ಸಂಪಾಜೆ ಗ್ರಾಮದ ಕಲ್ಲುಗುಂಡಿ ಆಯುಷ್ಮಾನ್ ಕೇಂದ್ರದ ಬಳಿ ಇಂಟರ್ಲಾಕ್ ಅಳವಡಿಕೆ ಹಾಗೂ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ರವರು ಅಲ್ಪಸಂಖ್ಯಾತ ಕಟ್ಟಡ ಯೋಜನೆಯಡಿ ಸಚಿವರಾದ ಝಮೀರ್ ಅಹಮ್ಮದ್ ಮೂಲಕ ವಿಶೇಷ ಅನುದಾನ ಮೀಸಲಿಟ್ಟಿದ್ದು, ಕಾಮಗಾರಿ ಪ್ರಾರಂಭವಾಗಬೇಕಾಗಿದೆ. ವಿಧಾನ ಪರಿಷತ್ ಸದಸ್ಯರಾದ ಮೋಹನ್ ಕೊಂಡಜ್ಜಿ ರವರ ವಿಶೇಷ, ಅನುದಾನದಲ್ಲಿ ರಾಜಾರಾಂಪುರ ಗೂನಡ್ಕ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಅನುದಾನ ತರುವಲ್ಲಿ ಟಿ.ಎಂ.ಶಹೀದ್ ಸಹಕರಿಸಿರುತ್ತಾರೆ.















ತಾಲೂಕು ಪಂಚಾಯತ್ ವತಿಯಿಂದ ಕಲ್ಲುಗುಂಡಿ ಶಾಲಾ ಕಟ್ಟಡದಲ್ಲಿ ಲೈಬ್ರೇರಿ ಕಟ್ಟಡ ರಚನೆ, ಕಲ್ಲುಗುಂಡಿ ಶಲಾ ಬಳಿ ಬಿಸಿಯೂಟ ಕೊಠಡಿ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ ಸಂಪಾಜೆ ಗ್ರಾಮದ ಆಲಡ್ಕ ಸಮುದಾಯ ಭವನದ ಬಳಿ ಶೌಚಾಲಯ ರಚನೆ ಕಾಮಗಾರಿ, ಚರಂಡಿ ಕಾಂಕ್ರೀಟ್ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದಂತೆ ಗ್ರಾಮದ ಬಹುತೇಕ ರಸ್ತೆ ಕಾಂಕ್ರೀಟ್ ಕಾಮಗಾರಿ ಪ್ರಗತಿಯಲ್ಲಿದ್ದು, ಚರಂಡಿ ಕಾಂಕ್ರೀಟ್ ಕಾಮಗಾರಿ ಪ್ರಗತಿಯಲ್ಲಿದೆ.
ಶಾಸಕರ ಅನುದಾನದಲ್ಲಿ ಕಡೆಪಾಲ ಸಣ್ಣಮನೆ ಗುಡ್ಡೆ ರಸ್ತೆ ಹಾಗೂ ಬಾಚಿಗದ್ದೆ ರಸ್ತೆ, ಬಂಗ್ಲೆಗುಡ್ಡೆ ರಸ್ತೆ ಕಾಮಗಾರಿಗೆ ಅನುದಾನ ಮಿಸಲಿಟ್ಟಿದ್ದು, ಕೆ.ಆರ್.ಡಿ.ಎಲ್ ನವರಿಗೆ ಟೆಂಡರ್ ಆಗಿರುತ್ತದೆ. ಗ್ರಾಮದ ಸಮಗ್ರ ಅಭಿವೃದ್ಧಿ ಗುರಿ ಇಟ್ಟಿರುವ ಗ್ರಾಮ ಪಂಚಾಯತ್, ಮಹಿಳೆಯರ ಸ್ವಾಲಂಬನೆ ಗುರಿ ಹೊಂದಿದ್ದು, ಕಸವಿಲೇವಾರಿ ಘಟಕ ವಾಹನ ಹೊಂದಿದ್ದು, ಮಹಿಳೆಯರ ಮೂಲಕ ಕಸ ವಿಲೇವಾರಿ ಮಾಡಲಾಗುತ್ತಿದೆ. ಅಲ್ಲದೆ ಸಂಜೀವಿನಿ ಘಟಕದ ಮೂಲಕ ವಿವಿಧ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ.
ನಮ್ಮ ಗ್ರಾಮ ಪಂಚಾಯತ್ಗೆ 2 ಬಾರಿ ಗಾಂಧಿಗ್ರಾಮ ಪುರಸ್ಕಾರ ದೊರಕಿದ್ದು, ಮಾತ್ರವಲ್ಲದೆ ಕಳೆದ ಬಾರಿ ಗಾಂಧಿಗ್ರಾಮ ಪುರಸ್ಕಾರಕ್ಕೆ ತೀವ್ರ ಸ್ಪರ್ಧೆ ನೀಡಿದ್ದು, ಪ್ರಸ್ತುತ ವರ್ಷ ಅರಂತೋಡು, ಗುತ್ತಿಗಾರು, ಸಂಪಾಜೆ 3 ಪಂಚಾಯತ್ಗಳು ಸ್ಪರ್ಧೆಯಲ್ಲಿದ್ದು, ಅಂತಿಮ ಫಲಿತಾಂಶ ಬರಬೇಕಾಗಿದೆ.
ಅಲ್ಲದೆ ಗ್ರಾಮ ಪಂಛಚಾಯತ್ ಉದ್ಯೋಗ ಖಾತ್ರಿ ಯೋಜನೆಯಡಿ, ರಸ್ತೆ ಕಾಂಕ್ರೀಟಿಕರಣ, ಮಣ್ಣಿನ ಚರಂಡಿ ಕಾಮಗಾರಿ, ಕೃಷಿ ಹೊಂಡ, ಬಿಸಿಯೂಟ ಕಟ್ಟಡ, ಶಾಲಾ ಆವರಣ ಗೋಡೆ, ಸಂಜೀವಿನಿ ಕಟ್ಟಡ, ಕಸ ವಿಲೇವಾರಿ ಘಟಕ, ದನದ ಹಟ್ಟಿ ಮತ್ತು ಹಲವು ಕಾಮಗಾರಿಗಳನ್ನು ಮಾಡಿರುತ್ತೇನೆ. ಕೃಷಿಕರಿಗೆ ಗೇರುಗಿಡ ವಿತರಣೆ, ಟರ್ಪಾಲು ವಿತರಣೆ, ಮನೆ ವಿತರಣೆ, ಅಡಿಕೆ, ಕೊಕ್ಕೊ, ತೆಂಗು ಗಿಡ ನೆಡುವುದಕ್ಕೆ ಅನುದಾನ, ಮಣ್ಣು ಪರೀಕ್ಷೆ, ತೆಂಗಿನ ಸಸಿ ವಿತರಣೆ ಮಾಡಿರುತ್ತೇವೆ.
ಪ.ಜಾತಿ ಜನಾಂಗದವರಿಗೆ ಟೈಲರ್ ಮೆಷಿನ್, ಹಾರೆ ಪಿಕ್ಕಾಸ್, ಕುಡಿಯುವ ನೀರಿನ ಸಿಂಟೆಕ್ಸ್ ಟ್ಯಾಂಕ್, ಸೋಲಾರ್ ದ್ವೀಪ ವ್ಯವಸ್ಥೆಯನ್ನು ಮಾಡಿದ್ದೇವೆ. ಮದ್ದು ಬಿಡುವ ಪಂಪು ಕೊಡುವ ಕಾರ್ಯಕ್ರಮ ಪ್ರಗತಿಯಲ್ಲಿದೆ ಎಂದು ವಿವರವಾಗಿ ಮಾತನಾಡಿದರು.










