














ಸುಳ್ಯ ತಾಲೂಕು
ಬಂಟರ ಯಾನೆ ನಾಡವರ ಸಂಘದಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ಡಿ. ತಿಂಗಳ 28ರಂದು ನಡೆಯಲಿದ್ದು, 2024.
-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಸ್ವಜಾತಿಯ ವಿದ್ಯಾರ್ಥಿಗಳು ಅಂಕಪಟ್ಟಿಯ ಜೆರಾಕ್ಸ್ ಪ್ರತಿಯೊಂದಿಗೆ ತಮ್ಮ ಪಾಸ್ಪೋರ್ಟ್ ಸೈಜ್ ಭಾವಚಿತ್ರ ಮತ್ತು ಸ್ವವಿಳಾಸದ ವಿವರವನ್ನು ತಮ್ಮ ತಮ್ಮ ವಲಯ ಅಧ್ಯಕ್ಷರಲ್ಲಿ ಅಥವಾ ಕಚೇರಿ ಕಾರ್ಯದರ್ಶಿ-ಕುಸುಮಾಧರ ರೈ (9343243257) ಯವರಲ್ಲಿ ಡಿ. 2ರ ಮೊದಲು ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಿಪಿಲ್ ಪಡಿತರ ಚೀಟಿ ಹೊಂದಿದವರಿಗೆ ಅಂಕಗಳ ಪರಿಗಣನೆ ಇರುವುದಿಲ್ಲ.
ಅದೇ ರೀತಿ ಜಿಲ್ಲಾ ಮಟ್ಟದ ವಿಜೇತ ಪ್ರತಿಭಾನ್ವಿತ ವಿದ್ಯಾರ್ಥಿಗಳು ಕೂಡ ತಮ್ಮಸಾಧನೆಯ ವಿವರಗಳನ್ನು ನೀಡಬಹುದೆಂದು ತಿಳಿಸಿದ್ದಾರೆ.










