ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಮತ್ತು ವಿವಿಧ ಯೋಜನೆಗಳ ಕುರಿತಂತೆ “ಕಲಾ ಜಾಥ ಪ್ರಚಾರ ಆಂದೋಲನ” ವಾಹನ ನಾಳೆ ಬೆಳಿಗ್ಗೆ 10.30ಕ್ಕೆ ಸುಳ್ಯ ನಗರಕ್ಕೆ ಆಗಮಿಸಲಿದೆ.
ನಾಳೆ ಬೆಳಿಗ್ಗೆ 10:30ಕ್ಕೆ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿ ಭವ್ಯ ಸ್ವಾಗತ ಕೊರಿ ಗಾಂಧಿನಗರ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿ ಪ್ರಚಾರ ಆಂದೋಲನ ಕಾರ್ಯಕ್ರಮ ನಡೆಯಲಿದೆ. ನಂತರ ಸುಳ್ಯದಿಂದ ಪ್ರಚಾರ ಆಂದೋಲನ ವಾಹನವನ್ನು ಬೀಳ್ಕೊಡಲಾಗುವುದು.















ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು, ಸರಕಾರದ ವಿವಿಧ ಸಮಿತಿಗಳ ನಾಮ ನಿರ್ದೇಶಿತ ಸದಸ್ಯರು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿರಬೇಕೇಂದು ಶಾಹುಲ್ ಹಮೀದ್ ಕುತ್ತಮೊಟ್ಟೆ ತಿಳಿಸಿದ್ದಾರೆ.










