ವಿಜಯಕುಮಾರ್ ಸುಳ್ಯರವರಿಗೆ ಗಾಯನಶ್ರೀ -2025 ಸನ್ಮಾನ

0

ಕಥಾ ಬಿಂದು ಪ್ರಕಾಶನ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ ಮಂಗಳೂರು ಇಲ್ಲಿ ಪಿ ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಇತ್ತೀಚೆಗೆ ನಡೆದ ಸಾಹಿತ್ಯ ಉತ್ಸವ ಕಾರ್ಯಕ್ರಮದಲ್ಲಿ ಗಾಯಕ ವಿಜಯಕುಮಾರ್ ಸುಳ್ಯರವರಿಗೆ ಗಾಯನ ಶ್ರೀ- 2025 ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನುಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ವಹಿಸಿದ್ದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಕಾರ್ಯಕ್ರಮ ಉದ್ಘಾಟಿಸಿದರು.


ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಕೆ. ವಿ. ಲಕ್ಷ್ಮಣಮೂರ್ತಿ, ನಟ,ನಿರ್ಮಾಪಕ ಡಾ. ಸತೀಶ ಬಂಗೇರ ,ತಾರಸಿ ಕೃಷಿಕ ಕೃಷ್ಣಪ್ಪಗೌಡ ಮೊದಲಾದವರು ಉಪಸ್ಥಿತರಿದ್ದರು.

ವಿಜಯ್ ಕುಮಾರ್ ರವರ ಹಲವಾರು ವೇದಿಕೆಯಲ್ಲಿನ ಗಾಯನವನ್ನು ಗುರುತಿಸಿ “ಗಾಯನ ಶ್ರೀ 2025” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇವರು ಸುಳ್ಯ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಇದರ ನಿರ್ದೇಶಕರಾಗಿರುತ್ತಾರೆ.