ಜ.17,18ರಂದು ಪಂಜದಲ್ಲಿ ರಾಜ್ಯ ಯುವಜನೋತ್ಸವ : ಸ್ಪೀಕರ್ ಯು.ಟಿ.ಖಾದರ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಮಾಜಿ ಸಿ.ಎಂ. ಡಿ.ವಿ. ಸದಾನಂದ ಗೌಡರ ಭೇಟಿ

0

ಜ.17 ಮತ್ತು18ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿ ನೇತೃತ್ವದಲ್ಲಿ ಪಂಜದಲ್ಲಿ ರಾಜ್ಯ ಯುವಜನೋತ್ಸವ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕರ್ನಾಟಕ ಸರಕಾರದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ರಿಗೆ ಆಹ್ವಾನ ನೀಡಲಾಗಿದೆ.

ನ.20ರಂದು ಬೆಂಗಳೂರಿನ ಅವರ ಕಚೇರಿಯಲ್ಲಿ ಈ ಇಬ್ಬರು ಗಣ್ಯರನ್ನು ಭೇಟಿ ಮಾಡಲಾಯಿತು. ಕಾರ್ಮಿಕ ಕನಿಷ್ಠ ವೇತನ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ರವರ ಮೂಲಕ ಸಚಿವರನ್ನು ಭೇಟಿ‌ ಮಾಡಿ‌ ಕಾರ್ಯಕ್ರಮದ ಕುರಿತು ಮಾತನಾಡಲಾಯಿತು.

ನ.21ರಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರನ್ನು ಭೇಟಿ ಮಾಡಿ ಆಹ್ವಾನ ನೀಡಲಾಯಿತು.

ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ನಿರ್ದೇಶಕರುಗಳಾದ ವಚನ ವಿಜೇಶ್ ಹಿರಿಯಡ್ಕ, ಸತೀಶ್ ಮೂಕಮಲೆ, ಹಾಗೂ ಕೌಶಿಕ್ ಕುದ್ವ, ಶಶಿದಾಸ್ ನಾಗತೀರ್ಥ ಜತೆಗಿದ್ದರು.