
ಸ್ವಚ್ಚತಾ ಅಭಿಯಾನದ ಪ್ರಯುಕ್ತ 41ನೇ ದಿನದ ಅಂಗವಾಗಿ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕುಕ್ಕೆಸುಬ್ರಹ್ಮಣ್ಯ ಚಂಪಾಷಷ್ಠಿ ಜಾತ್ರೋತ್ಸವ ಮತ್ತು ಲಕ್ಷ ದೀಪೋತ್ಸವ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ ನ.19 ರಂದು ನಡೆಸಲಾಯಿತು.















ಕುಮಾರಧಾರ ಸೇತುವೆ ಬಳಿಯಿಂದ ಕುಲ್ಕುಂದ ವರೆಗೆ ರಸ್ತೆ ಬದಿ ಪ್ಲಾಸ್ಟಿಕ್ ಹಾಗು ಕಸ ಹೆಕ್ಕುವ ಮೂಲಕ ಸ್ವಚ್ಚಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯದ ಸಮಾಜಸೇವಾ ಟ್ರಸ್ಟ್ ನ ಅಧ್ಯಕ್ಷರಾದ ರವಿ ಕಕ್ಕೆಪದವು ಹಾಗು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾಪ್ರತಿನಿಧಿ ಲೋಕೇಶ್ವರ ಡಿ. ಆರ್. ಮತ್ತಿತರು ಉಪಸ್ಥಿತರಿದ್ದರು.










