ಮುರುಳ್ಯ ಶಾಂತಿನಗರ ಶಾಲೆಯಲ್ಲಿ ಏಣ್ಮೂರು ಕ್ಲಟ್ಟರ್ ಮಟ್ಟದ ಪ್ರತಿಭಾ ಕಾರಂಜಿ – ಮುರುಳ್ಯ ಶಾಂತಿನಗರ ಶಾಲೆಗೆ ಕಿರಿಯ ಹಿರಿಯ ದ್ವಿತೀಯ, ತೃತೀಯ ಸಮಗ್ರ ಪ್ರಶಸ್ತಿ

0

2025-26 ನೇ ಸಾಲಿನ ಪ್ರತಿಭಾ ಕಾರಂಜಿಯು ಸ.ಹಿ.ಪ್ರಾ ಶಾಲೆ, ಮುರುಳ್ಯ ಶಾಂತಿನಗರದಲ್ಲಿ ನಡೆಯಿತು.
ಶಾಸಕಿ ಕು.ಭಾಗೀರಥಿ ಮುರುಳ್ಯ, ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ಶ್ರಿಮತಿ ವನಿತಾ ಸುವರ್ಣ, ಉಪಾಧ್ಯಕ್ಷೆ ಕು. ಜಾನಕಿ ಮುರುಳ್ಯ, ಸದಸ್ಯರಾದ ಶ್ರೀಮತಿ ಶೀಲಾವತಿ ಗೋಳ್ತಿಲ, ಶ್ರೀಮತಿ ಪುಪ್ಪಾವತಿ ಕುಕ್ಕಟೆ, ಶ್ರೀಮೋನಪ್ಪ ಗೌಡ ಆಲೇಕಿ, ಸುಂದರ ಗೌಡ ಪಾಪುತ್ತಡಿ, ಶೇರ, ಕರುಣಾಕರ ಹುದೇರಿ, ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು.ಕೆ, ಇ.ಸಿ.ಒ. ಶ್ರೀಮತಿ ಧನಲಕ್ಷ್ಮಿ, ದಾನಿಗಳಾದ ರಾಮಕೃಷ್ಣ ಭಟ್ ಮತ್ತು ಶ್ರೀಮತಿ ಲೀಲಾವತಿ ರಾಘವಗೌಡ ಪಲ್ಲತ್ತಡ್ಕ, ಸಿ.ಆರ್.ಪಿ ಜಯಂತ ಕಳತ್ತಜೆ, ಬಿ.ಆರ್.ಪಿ ಸುಬ್ರಹ್ಮಣ್ಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ಜಗದೀಶ್ ಹುದೇರಿ, ಮುರುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವಸಂತ ನಡುಬೈಲು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವ ಕಾರ್ಯದರ್ಶಿ ಶ್ರೀಮತಿ ಸರೋಜಿನಿ, ಸರಕಾರಿ‌ ನೌಕರರ ಸಂಘದ ನಿರ್ದೇಶಕರಾದ ಶ್ರೀಮತಿ ನಳಿನಾಕ್ಷಿ, ಇ.ಸಿ.ಒ. ಶ್ರೀಮತಿ ಸಂಧ್ಯಾಕುಮಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ನಿಂತಿಕಲ್ಲು ವಲಯದ ವ್ಯವಸ್ಥಾಪಕರಾದ ಶ್ರೀಮತಿ ಸವಿತ ಶೆಟ್ಟಿ ,ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದಿನೇಶ್ ನಡುಬೈಲು, ಉಪಾಧ್ಯಕ್ಷೆ ಶ್ರೀಮತಿ ಬೇಬಿ , ಮುಖ್ಯ ಶಿಕ್ಷಕಿ ಶ್ರೀಮತಿ ಸೀತಾ ವಿ‌ ಸಭೆಯಲ್ಲಿ ಉಪಸ್ಥಿತರಿದ್ದರು.