ಸಂಸ್ಕೃತಿ ಯಾವುದೂ ಕೇವಲ ಆಚರಣೆಗಳಲ್ಲ, ಅದು ನಮ್ಮ ಪಠ್ಯ ಪುಸ್ತಕವಲ್ಲದ ಪಾಠಗಳು, ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕೆ ಆಧಾರವಾಗಿರುವ ಜೀವನ ಶೈಲಿ : ಮೌರ್ಯ ಆರ್. ಕುರುಂಜಿ















ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಯಾತ್ನಿಕ್ ಡೇ ಆಚರಣೆಯು ನ. ೧೫ರಂದು ಕಾಲೇಜಿನಲ್ಲಿ ನಡೆಯಿತು. ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿಗಳು ಮತ್ತು ವಿದ್ಯಾರ್ಥಿಗಳು ವಿವಿಧ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು ವಿಶೇಷ ರೀತಿಯಲ್ಲಿ ದಿನವನ್ನು ಆಚರಿಸಲಾಯಿತು. ಕೆ.ವಿ.ಜಿ.ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಎಕ್ಸೆಕ್ಯುಟಿವ್ ಡೈರೆಕ್ಟರ್ ಮೌರ್ಯ ಆರ್. ಕುರುಂಜಿ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಸ್ಕೃತಿ ಯಾವುದೂ ಕೇವಲ ಆಚರಣೆಗಳಲ್ಲ, ಅದು ನಮ್ಮ ಪಠ್ಯ ಪುಸ್ತಕವಲ್ಲದ ಪಾಠಗಳು, ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕೆ ಆಧಾರವಾಗಿರುವ ಜೀವನ ಶೈಲಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಪರಸ್ಪರ ಗೌರವ ಸಹಭಾಗಿತ್ವ ಮತ್ತು ಭಾರತೀಯ ಸಂಸ್ಕೃತಿಯ ಒಳ ನೋಟವನ್ನು ವಿಸ್ತರಿಸಲು ಸಹಕರಿಸುತ್ತವೆ ಎಂದು ಪ್ರಶಂಶಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ.ಯವರು, ಉಪಪ್ರಾಂಶುಪಾಲರು ಡಾ. ಶ್ರೀಧರ್ ಕೆ., ಡೀನ್ ಅಕಾಡೆಮಿಕ್ ಡಾ. ಪ್ರಜ್ಞಾ ಎಂ.ಆರ್ ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರುಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೇರಳ ಶೈಲಿಯ ಚೆಂಡೆ ವಾದ್ಯಗಳು ನಮ್ಮ ದೇಶದ ವಿಭಿನ್ನ ಸಂಸ್ಕೃತಿಗಳನ್ನು ಬಿಂಬಿಸುವಂತಹ ಹಲವು ಉಡುಗೆ ತೊಡುಗೆಗಳು ಯಾತ್ನಿಕ್‌ಡೇಯ ಮೆರುಗನ್ನು ಹೆಚ್ಚಿಸಿತ್ತು. ಕಾರ್ಯಕ್ರಮದಲ್ಲಿ ವಿವಿಧ ರೀತಿಯ ನೃತ್ಯ ಪ್ರದರ್ಶನಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕರಾದ ಸಿವಿಲ್ ವಿಭಾಗದ ಪ್ರೊ. ಕೃಷ್ಣರಾಜ್ ಎಂ.ವಿ. ಹಾಗೂ ಬಳಗ ಗೀತೆಯೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.










