
ಯಕ್ಷ ಕಲಾಬೋಧಿನೀ ಬೆಳ್ಳಾರೆ ಇದರ ಆಶ್ರಯದಲ್ಲಿ ಯಕ್ಷಗಾನ ತರಬೇತಿ ಕಾರ್ಯಕ್ರಮ ನ. 23ರಂದು ಉದ್ಘಾಟನೆಗೊಂಡಿತು.















ಯಕ್ಷ ಕಲಾಬೋಧಿನೀ ಅಧ್ಯಕ್ಷ ಲೋಕೇಶ್ ತಂಟೆಪ್ಪಾಡಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಯಕ್ಷಗಾನ ಹಾಸ್ಯ ಕಲಾವಿದ ದಿನೇಶ್ ರೈ ಕಡಬ ಉದ್ಘಾಟಿಸಿದರು. ಶ್ರೀ ಕ್ಷೇತ್ರ ಕೊಲ್ಲಂಗಾನದ ಶ್ರೀಚಕ್ರ ಆರಾಧಕರಾದ ಬ್ರಹ್ಮಶ್ರೀ ತಂತ್ರಿ ಗಣಾಧಿರಾಜ ಉಪಾಧ್ಯಾಯ ಚೆಂಡೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಆಶೀರ್ವಚನ ನೀಡಿದರು. ನಾಟ್ಯ ಗುರುಗಳಾದ ಮಹೇಶ್ ಎಡನೀರು ಯಕ್ಷ ಕಲಾಬೋಧಿನೀಯ ಗೌರವಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ, ಹಿರಿಯ ಯಕ್ಷಗಾನ ಕಲಾವಿದ ಸುಭಾಶ್ಚಂದ್ರ ರೈ ತೋಟ ಜೆಸಿಐ ಬೆಳ್ಳಾರೆ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಬೀಡು ಮತ್ತು ಯಕ್ಷ ಪೋಷಕರಾದ ಉದಯಕುಮಾರ್ ಭಟ್ ಕುರಿಯಾಜೆ ಅತಿಥಿಗಳಾಗಿ ಭಾಗವಹಿಸಿದ್ದರು.
ಯಕ್ಷ ಕಲಾಬೋಧಿನೀ ಕೋಶಾಧಿಕಾರಿ ಭಾರತಿ ಕೆ.ಪಿ ಸ್ವಾಗತಿಸಿದರು. ಕು. ದೃತಿ ಪಡ್ಪು ಪ್ರಾರ್ಥಿಸಿದರು. ಯಕ್ಷ ಕಲಾಬೋಧಿನೀ ಬೆಳ್ಳಾರೆ ಸಂಚಾಲಕ ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.










