ಕಲೆಯ ಮೂಲಕ ಕಾಡಿನ ರಕ್ಷಣೆಯ ಜಾಗೃತಿ : ಎನ್ ಮಂಜುನಾಥ್

ವನ ಹಾಗೂ ವನ್ಯ ಜೀವಿಗಳ ರಕ್ಷಣೆ ಪ್ರತಿಯೊಬ್ಬನ ಹೊಣೆ. ಈ ಆಶಯವನ್ನು ಇಟ್ಟುಕೊಂಡ ವರ್ಣ ಚಿತ್ರ ಸ್ಪರ್ಧೆಯು ಮಕ್ಕಳಲ್ಲಿ ಕಾಡಿನ ರಕ್ಷಣೆಯ ಹೊಣೆಯನ್ನು ನೆನಪಿಸುತ್ತದೆ ಎಂದು ಸುಳ್ಯದ ವಲಯ ಅರಣ್ಯ ಅಧಿಕಾರಿ ಎನ್ ಮಂಜುನಾಥ್ ಹೇಳಿದ್ದಾರೆ.
ಕನ್ನಡ ಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಮಕ್ಕಳ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ರಾಜ್ಯ ಮಟ್ಟದ ಚಿತ್ರ ಕಲಾ ಸ್ಪರ್ಧೆಯ ಸುಳ್ಯ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ ಮತ್ತು ಸ್ವರ್ಣ ಜ್ಯುವೆಲ್ಸ್ ಸಹಯೋಗದಲ್ಲಿ ಇಂದು ಸ್ನೇಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಈ ಸ್ಪರ್ಧೆ ನಡೆಯಿತು.
ಸ್ಪರ್ಧೆಯನ್ನು ಉದ್ಘಾಟಿಸಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಮಾತನಾಡಿ, ಕಲೆಯ ಅಭಿರುಚಿ ಇಲ್ಲದವನಲ್ಲಿ ಮನುಷ್ಯತ್ವವೂ ಇರುವುದಿಲ್ಲ. ಪ್ರತಿಯೊಬ್ಬನಲ್ಲೂ ಕಲೆ ಇದೆ. ಆ ಕಲೆಯನ್ನು ಉದ್ದೀಪನ ಮಾಡುವ ಕಾರ್ಯ ನಡೆದಿರುವುದು ಶ್ಲಾಘನೀಯ ಎಂದರು.
















ಮುಖ್ಯ ಅತಿಥಿಯಾಗಿದ್ದ ಸುಳ್ಯ ಪ್ರೆಸ್ ಕ್ಲಬ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಮಾತನಾಡಿ , ವಿದ್ಯಾರ್ಥಿಗಳ ಬುದ್ಧಿ ಮತ್ತೆಯನ್ನು ಹೆಚ್ಚಿಸುವ ಕಾರ್ಯ ಚಿತ್ರ ಕಲೆಗಳಿಂದ ಆಗುತ್ತಿದೆ. ಪತ್ರಿಕೆಗಳು ಈ ಅಭಿರುಚಿಯನ್ನು ಹೆಚ್ಚಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಕನ್ನಡ ಪ್ರಭ ಮಂಗಳೂರು ಆವೃತ್ತಿಯ ಸ್ಥಾನೀಯ ಸಂಪಾದಕ ರಾಘವೇಂದ್ರ ಅಗ್ನಿಹೋತ್ರಿ ಸಂದರ್ಭೋಚಿತವಾಗಿ ಮಾತನಾಡಿದರು.
ಕನ್ನಡ ಪ್ರಭ ಪತ್ರಿಕೆಯ ಸುಳ್ಯದ ವರದಿಗಾರ ದುರ್ಗಾಕುಮಾರ್ ನಾಯರ್‌ಕೆರೆ ಸ್ವಾಗತಿಸಿದರು. ಹಿರಿಯ ಪ್ರಧಾನ ವರದಿಗಾರ ಆತ್ಮಭೂಷಣ್ ಪ್ರಸ್ತಾವನೆ ಗೈದರು. ತೀರ್ಪುಗಾರರ ಪರವಾಗಿ ಚಿತ್ರಕಲಾ ಶಿಕ್ಷಕ ಪ್ರಸನ್ನ ಐವರ್ನಾಡು ಮಾತನಾಡಿದರು. ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ವಂದಿಸಿದರು. ಶಿಕ್ಷಕ ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಬಹುಮಾನ ವಿಜೇತರು :
ಸ್ಪರ್ಧೆಯಲ್ಲಿ 4 ಮತ್ತು 5ನೇ ತರಗತಿ ವಿಭಾಗದಲ್ಲಿ ನಿಹಾಲ್ ಕೆ.ಎ., ಮಾರುತಿ ಪಬ್ಲಿಕ್ ಸ್ಕೂಲ್ ಗೂನಡ್ಕ (ಪ್ರ), ನಯೋನಿಕ ಬಿ.ಸಿ., ಸೈಂಟ್ ಆನ್ಸ್ ಕಡಬ (ದ್ವಿ), ಭವಿಕ್ ಕೆ.ಹೆಚ್., ಜ್ಞಾನಗಂಗ ಬೆಳ್ಳಾರೆ (ತೃ), ಪುರಸ್ಕೃತ ಬಿ.ಎ., ಜ್ಞಾನಗಂಗಾ ಬೆಳ್ಳಾರೆ, ಅನಿಸಿಕ ರೋಟರಿ ಶಾಲೆ ಸುಳ್ಯ,(ಸಮಾಧಾನಕರ) ಬಹುಮಾನ ಪಡೆದರು.
6 ಮತ್ತು 7ನೇ ತರಗತಿ ವಿಭಾಗದಲ್ಲಿ ಸಾತ್ವಿಕ್ ಅಟ್ಲೂರು, ರೋಟರಿ ಶಾಲೆ ಸುಳ್ಯ (ಪ್ರ), ವೈಷ್ಣವಿ, ಸ.ಹಿ.ಪ್ರಾ.ಶಾಲೆ ಕದಿಕಡ್ಕ (ದ್ವಿ), ಅನ್ವಿತ ಶೆಟ್ಟಿ, ಸೈಂಟ್ ಆನ್ಸ್ ಕಡಬ (ತೃ), ಸಾನ್ವಿ ಎನ್.ಎಸ್. ಸ.ಹಿ.ಪ್ರಾ.ಶಾಲೆ ಪಂಜ, ಪ್ರಾಪ್ತಿ ಎನ್.ಎಸ್ ಸ.ಹಿ.ಪ್ರಾ.ಶಾಲೆ ಪಂಜ (ಸಮಾಧಾನಕರ) ಬಹುಮಾನ ಪಡೆದರು.
8, 9, 10ನೇ ತರಗತಿ ವಿಭಾಗದಲ್ಲಿ ಸಾನ್ವಿ ಕೆ.ಡಿ., ಕುಮಾರ ಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ (ಪ್ರ), ಪ್ರತೀಕ್ಷಾ, ಕೆವಿಜಿ ಐ.ಪಿ.ಎಸ್. ಸುಳ್ಯ(ದ್ವಿ), ಸಾನ್ವಿ ಅಟ್ಲೂರು, ರೋಟರಿ ಸುಳ್ಯ (ತೃ), ವಂಶಿ ಬಿ.ಆರ್., ರೋಟರಿ ಸುಳ್ಯ, ಶ್ರೀತನ್ ಟಿ., ರೋಟರಿ ಸುಳ್ಯ (ಸಮಾಧಾನಕರ) ಬಹುಮಾನ ಗಳಿಸಿದರು.










