ಪೆರಾಜೆ ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೆಹ್ ಫಿಲೆ ಮದೀನಾ ಕಾರ್ಯಕ್ರಮ

0

ಕರ್ನಾಟಕಕ್ಕೆ ಪ್ರಥಮ ಬಾರಿ ಆಗಮಿಸಿದ ಸೂಫಿ ಗಾಯಕ ಲಿರಾರ್ ಅಮೀನ್

ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ (ರಿ) ಇದರ 16ನೆಯ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪೆರಾಜೆಯಲ್ಲಿ ಮೆಹ್ ಫಿಲೇ ಮದೀನ ಸರಣಿ ಕಾರ್ಯಕ್ರಮಗಳು ನಡೆಯುತ್ತಿದೆ.

ನವಂಬರ್ 22 ರಿಂದ 28ನೇ ತಾರೀಕಿನವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು ಮೂರನೇ ದಿನವಾದ ನ 23 ರಂದು ಬುರ್ದಾ ಮಜ್ಲಿಸ್ ಹಾಗೂ ಸೂಫಿ ಖವ್ವಾಲಿ ಕಾರ್ಯಕ್ರಮ ಸಾವಿರಾರು ಮಂದಿ ಜನಸ್ತೋಮದ ಸಾಕ್ಷಿಯೊಂದಿಗೆ ಯಶಸ್ವಿಯಾಗಿ ನೆರವೇರಿತು.
ಲಕ್ಷದೀಪದ ಸೂಫಿ ಕವ್ವಾಲಿ ಗಾಯಕ ಪೈಗಂಬರ್ ರವರ ಕೀರ್ತನೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಕ್ಕೂ ಮೀರಿದ ಅಭಿಮಾನಿ ಬಳಗವನ್ನು ಹೊಂದಿದ ಲಿರಾರ್ ಅಮೀನ್ ರವರು ಪ್ರಪ್ರಥಮ ಬಾರಿಗೆ ಕರ್ನಾಟಕದ ಕಾರ್ಯಕ್ರಮ ಒಂದಕ್ಕೆ ಪೆರಾಜೆಗೆ ಆಗಮಿಸಿದ್ದು ಸಾವಿರಾರು ಮಂದಿ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಯಿತು.
ಅಲ್ಲದೆ ಸುಪ್ರಸಿದ್ಧ ಗಾಯಕರಾದ ನಾಸಿಫ್ ಕ್ಯಾಲಿಕಟ್, ಮೆಹ್ಫೂಸ್ ರಿಹಾನ್ ಮತ್ತು ಶುಕೂರ್ ಇರ್ಪಾನಿ ತಂಡಂದಿಂದ ಮದ್ಹ್ ಗಾನ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಸಂಘಟಕರಾದ
ಉನೈಸ್ ಪೆರಾಜೆ ಹಾಗೂ ತಂಡದ ಸದಸ್ಯರು ಸಹಕರಿಸಿದರು.ಸ್ಥಳೀಯ ಮಸೀದಿ ಖತೀಬರು ದುವಾ ನೆರವೇರಿಸಿ ಖ್ಯಾತ ನಿರೂಪಕ ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಸಮಾರೋಪ ಸಮಾರಂಭ ನವಂಬರ್ 25ರಂದು ನಡೆಯಲಿದ್ದು 24ರಂದು ಸೋಮವಾರ ಸಂಜೆ ಖ್ಯಾತ ಕಥಾ ಪ್ರಸಂಗ ತಂಡದ ಸಿಕೆಎಸ್ ಅಬ್ದುಲ್ ಸಲಾಂ ಮೌಲವಿ ಪಾಣಕಾಡು ರವರಿಂದ ಧಾರ್ಮಿಕ ಕಥಾ ಪ್ರಸಂಗ ಹಾಗೂ ಖ್ಯಾತವಾಗ್ಮಿ ಮೊಹಮ್ಮದ್ ರಿಯಾಜ್ ಮುದೀನಿ ರವರಿಂದ ಧಾರ್ಮಿಕ ಪ್ರಭಾಷಣ ನಡೆಯಲಿದೆ.
ಸಮಾರೋಪ ಸಮಾರಂಭದ ದುವಾ ನೇತೃತ್ವವನ್ನು ಸಯ್ಯದ್ ಕುಂಞಿ ಕೋಯ ತಂಙಳ್ ಸಅದಿ ಸುಳ್ಯ ಇವರು ನೆರವೇರಿಸಲಿದ್ದು ಪ್ರಭಾಷಣಕಾರರಾಗಿ ಉಸ್ಮಾನ್ ಜೊಹರಿ ನೆಲ್ಯಾಡಿ ಹಾಗೂ ಸುಹೈಲ್ ಫೈಝಿ ಕುರಾಡ್ ರವರು ಭಾಗವಹಿಸಲಿದ್ದಾರೆ.