ಅರಂತೋಡು ಗ್ರಾ. ಪಂ. ಘನ ತಾಜ್ಯ ಘಟಕದ ಮರು ನಿರ್ಮಾಣಕ್ಕೆ ಗುದ್ದಲಿ ಪೂಜೆ

0

ಶಾಸಕಿ ಭಾಗೀರಥಿ ಮುರುಳ್ಯ ಭಾಗಿ

ಒಂದೇ ಸೂರನಡಿಯಲ್ಲಿ ಸರಕಾರಿ ಕಚೇರಿಗಳ ಉದ್ಘಾಟನೆ

ನಾಲ್ಕು ಜನ ಸಾಧಕರಿಗೆ ಸನ್ಮಾನ – ವಿಶೇಷ ಗ್ರಾಮ ಸಭೆ

ಆಕಸ್ಮಿಕವಾಗಿ ಬೆಂಕಿ ಅವಘಡಕ್ಕೆ ತುತ್ತಾದ ರಾಜ್ಯದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅರಂತೋಡು ಗ್ರಾಮ ಪಂಚಾಯತ್ ನ ಕೊಡಂಕೇರಿಯಲ್ಲಿಯ ಘನತ್ಯಾಜ್ಯ ಘಟಕ ಮರು ನಿರ್ಮಾಣಕ್ಕೆ ಮತ್ತು ಅದಕ್ಕೆ ಸಂಪರ್ಕಿಸುವ ಉದಯನಗರ- ಕೊಡಂಕೇರಿ ರಸ್ತೆಯ ಕಾಂಕ್ರಿಟೀಕರಣದ ಗುದ್ದಲಿ ಪೂಜೆ ಕಾರ್ಯಕ್ರಮ ನ.೨೪ ರಂದು ನಡೆಯಿತು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು. ಅರಂತೋಡು ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕಂದಾಯ ಕಚೇರಿ ಯನ್ನು ಗ್ರಾಮ ಪಂಚಾಯತ್ ಹಳೆ ಸಭಾ ಭವನಕ್ಕೆ ಸ್ಥಳಾಂತರಿಸಿ ನೂತನ ಕಚೇರಿಯನ್ನು ಶಾಸಕಿ ಭಾಗೀರಥಿ ಉದ್ಘಾಟನೆ ಮಾಡಿದರು.


ಸುಮಾರು೧.೨೦ ಸಾವಿರ ವ್ಯಯ ಮಾಡಿ ಜನರ ಸಮಸ್ಯೆಗಳಿಗೆ ಗ್ರಾಮ ಪಂಚಾಯತ್ ಒಂದೇ ಸೂರಿನಡಿಯಲ್ಲಿ ಸಾರ್ವಜನಿಕರ ಸೌಲಭ್ಯಗಳು ದೊರೆಯುವಂತೆ ಕಚೇರಿಯನ್ನು ತೆರೆಯಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನಾಲ್ಕು ಮಂದಿ ಸಾಧಕರಾದ ಕೆ.ಆರ್.ಗಂಗಾಧರ, ಕರ್ನಾಟಕ ಸರಕಾರದ ಕಾರ್ಮಿಕ ಕನಿಷ್ಠ ವೇತನ ನಿಗಮ ಅಧ್ಯಕ್ಷರಾದ ಟಿ.ಎಂ.ಶಾಹೀದ್, ಫಾರೆಸ್ಟರ್ ಸೀತಾರಾಮ, ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆಯವರನು ತಹಶೀಲ್ದಾರ್ ಮಂಜುಳಾ, ಇ.ಒ.ರಾಜಣ್ಣ, ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಮೊದಲಾದವರು ಸನ್ಮಾನಿಸಿದರು.


ಸನ್ಮಾನ ಸ್ವೀಕರಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಇ ಓ ರಾಜಣ್ಣ ಮಾತನಾಡಿ, ಅರಂತೋಡು ಗ್ರಾಮ ಪಂಚಾಯತ್ ಕಾರ್ಯ ವೈಖರಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ತಹಶೀಲ್ದಾರ್ ಮಂಜುಳಾ ಶುಭ ಹಾರೈಸಿದರು. ಅಧ್ಯಕ್ಷ ಕೇಶವ ಅಡ್ತಲೆ ಮಾತನಾಡಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಉದ್ಯೋಗ ಖಾತರಿ ಅಧಿಕಾರಿ ಸುಧಾಮ ಕೃಷ್ಣ ಉದ್ಯೋಗ ಖಾತ್ರಿಯ ಬಗ್ಗೆ ಮಾತನಾಡಿದರು. ಸಭೆಯಲ್ಲಿ ಜನಪ್ರತಿನಿದಿನಗಳು, ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಭವಾನಿ ವಂದಿಸಿದರು. ಪಿಡಿಒ ಜಯಪ್ರಕಾಶ್ ಸ್ವಾಗತಿಸಿ, ವಂದಿಸಿದರು.