Home ಪ್ರಚಲಿತ ಸುದ್ದಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ: ವೀಲ್ ಚೇರ್ ಕೊಡುಗೆ – ಹಸ್ತಾಂತರ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ: ವೀಲ್ ಚೇರ್ ಕೊಡುಗೆ – ಹಸ್ತಾಂತರ

0

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವೃದ್ಧರು, ನಡೆದಾಡಲು ಅಸಕ್ತರಾಗಿರುವವರಿಗೆ ಸಹಕಾರಿಯಾಗಲು ಶಿವಮೊಗ್ಗದ ಕುಕ್ಕೆ ಕ್ಷೇತ್ರದ ಭಕ್ತರು ನೀಡಿದ ವೀಲ್ ಚೇರ್ ಅನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಸ್ತಾಂತರಿಸುವ ಕಾರ್ಯಕ್ರಮ ನ.25 ರಂದು ನಡೆಯಿತು.


ಶಿವಮೊಗ್ಗದ ತರಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ಕಿರಣ್ ಕುಮಾರ್ ಹಾಗೂ ಶಿವಮೊಗ್ಗದ ಗಜಾನನ ಮೆಡಿಕಲ್ ಮಾಲಕ ವಿನಾಯಕ ಸ್ವಾಮಿ ಅವರು ಎರಡು ವೀಲ್ ಚೇರ್ ಅನ್ನು ಕೊಡುಗೆಯಾಗಿ ನೀಡಿದ್ದರು. ಅದನ್ನು ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು. ಕಾಲೇಜಿನ ಉಪನ್ಯಾಸಕ ಸೋಮಶೇಖರ ನಾಯಕ್ ಅವರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರ ಮೂಲಕ ದೇವಸ್ಥಾನಕ್ಕೆ ಹಸ್ತಾಂತರಿಸಿದರು. ಹರೀಶ್ ಇಂಜಾಡಿ ಅವರು ಕೊಡುಗೆ ನೀಡಿದದವರನ್ನು ಗೌರವಿಸಿ, ಕೃತಜ್ಞತೆ ಸಲ್ಲಿಸಿದರು.


ವ್ಯವಸ್ಥಾಪನಾ ಸಮಿತಿ ಸದಸ್ಯೆ ಲೀಲಾ ಮನಮೋಹನ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಲೋಲಾಕ್ಷ ಕೈಕಂಬ, ಎಸ್.ಎಸ್.ಪಿ.ಯು. ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್, ಪ್ರಮುಖರಾದ ವಸಂತ ಕೆದಿಲ, ಪ್ರದೀಪ್ ಕಳಿಗೆ, ವಿಜಯಕುಮಾರ್ ನಡುತೋಟ ಮತ್ತಿತರರು ಉಪಸ್ಥಿತರಿದ್ದರು.

NO COMMENTS

error: Content is protected !!
Breaking