ಡಾ. ಡಿ. ವೀರೇಂದ್ರ ಹೆಗ್ಗಡೆ ಯವರ ಜನ್ಮದಿನದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

0

ಅಲೆಟ್ಟಿ ಸದಾಶಿವ
ದೇವಸ್ಥಾನದ ವಠಾರದಲ್ಲಿ ಸಂಘದ ಸದಸ್ಯರಿಂದ ಶ್ರಮದಾನ

ಧರ್ಮಸ್ಥಳದಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರ ಜನ್ಮ ದಿನದ ಪ್ರಯುಕ್ತ ನ. 25 ರಂದು ಅಲೆಟ್ಟಿ ಸದಾಶಿವ ದೇವಸ್ಥಾನದ ವಠಾರವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಧರ್ಮಾ ಧಿಕಾರಿಯವರ ಹೆಸರಿನಲ್ಲಿ ದೇವಸ್ಥಾನದಲ್ಲಿ ವಿಶೇಷವಾಗಿ ಪೂಜೆಯನ್ನು ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾ ಧಿಕಾರಿ ಶರತ್ ಕುಮಾರ್, ಸೇವಾಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಉಳ್ಳಾಕುಲು ದೈವಸ್ಥಾನದ ಪೂಜಾರಿ ಲಕ್ಷ್ಮಣಗೌಡ ಪರಿವಾರ, ಒಕ್ಕೂಟದ ಅಧ್ಯಕ್ಷ ನಿತ್ಯಾನಂದ,
ಸೇವಾಪ್ರತಿನಿಧಿ ರೋಹಿಣಿ ಕುಡೆಕಲ್ಲು ಉಪಸ್ಥಿತರಿದ್ದರು.
ಆಲೆಟ್ಟಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡರು.