ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಅಸೋಸಿಯೇಷನ್ (ಕೆ.ಎಸ್.ಬಿ.ಎ.) ಇದರ ವತಿಯಿಂದ ನಡೆಯುವ ರಾಜ್ಯ ಮಟ್ಟದ ಕಿರಿಯರ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ ಗೆ ಸಂಪಾಜೆಯ ತೌಸಿಫ್ ಟರ್ಲಿ ಆಯ್ಕೆಯಾಗಿದ್ದಾರೆ.















ಇವರು ಸುಳ್ಯದ ಕ್ಯೂ ಕ್ಲಬ್ ಲೀಕೇಶ್ ಹಾಗೂ ಪಾಟ್ ಶಾಟ್ ಕಿಶೋರ್ ರವರಲ್ಲಿ ತರಬೇತಿ ಪಡೆದಿದ್ದು, ಚಾಂಪಿಯನ್ಶಿಪ್ ಗೆ ಆಯ್ಕೆಯಾದ 32 ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ.
ಬೆಂಗಳೂರಿನ ಇಂದಿರಾನಗರ ಕಂಪೋಸಿಟ್ ಪಿ.ಯು. ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾಭ್ಯಾಸ ಮಾಡುತ್ತಿರುವ ಇವರು
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಸುಳ್ಯದ ಅಶ್ರಫ್ ಟರ್ಲಿ ಹಾಗೂ ತಾಹಿರ ದಂಪತಿಗಳ ಪುತ್ರ.










