ಬೆಳ್ಳಾರೆ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2025ಅಂಗವಾಗಿ ದರ್ಖಾಸ್ತು ಶಾಲೆಯಲ್ಲಿ ಪಠ್ಯ ಮತ್ತು ಪಠ್ಯದಾಚೆಗಿನ ಕಲಿಕೆ ಕಾರ್ಯಕ್ರಮ

0

ಪಠ್ಯದಾಚೆಗಿನ ಕಲಿಕೆಯಲ್ಲಿಉತ್ಸಾಹದಿಂದ ಭಾಗವಹಿಸಿ ಸಂತೋಷ ಪಟ್ಟ ವಿದ್ಯಾರ್ಥಿಗಳು

ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಬೆಳ್ಳಾರೆ, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರ ಬೆಳ್ಳಾರೆ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದರ್ಖಾಸ್ತು ಇವರ ಸಹಕಾರದೊಂದಿಗೆ ನಡೆಯುವ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2025 ಅಂಗವಾಗಿ ಮಕ್ಕಳಲ್ಲಿ ಪಠ್ಯ ಮತ್ತು ಪಠ್ಯದಾಚೆಗಿನ ಕಲಿಕೆ ಕಾರ್ಯಕ್ರಮ ನ. 26ರಂದು ನಡೆಯಿತು.
ರಾಷ್ಟ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಪಿ. ಎನ್ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು.

ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ಮಣಿಕಂಠ ಕಲ್ಲೋಣಿ, ಸದಸ್ಯರಾದ ಶ್ರೀಮತಿ ಭವ್ಯ ಶಾಲಾ ಎಸ್ ಡಿ.ಎಂ.ಸಿ ಅಧ್ಯಕ್ಷರಾದ ಅಬೂ ಸಾಲಿಹ್ ಕೆ.ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪ್ರೇಮ ಆರ್ ಸ್ವಾಗತಿಸಿ, ಗ್ರಂಥಾಪಾಲಕಿ ಶ್ರೀಮತಿ ಶಶಿಕಲಾ ವಂದಿಸಿದರು. ಶಿಕ್ಷಕ ಬಾಲಾಜಿ ಟಿ ಕಾರ್ಯಕ್ರಮ ನಿರೂಪಿಸಿದರು.