ಬೆಳ್ಳಾರೆ ಗ್ರಾಮದ ಮಾಸ್ತಿಕಟ್ಟೆ (ತಡಗಜೆ) ಅಂಗನವಾಡಿಯಲ್ಲಿ ಐ.ಸಿ.ಡಿ.ಎಸ್ 50 ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಎಲ್.ಕೆ.ಜಿ,ಯು.ಕೆ.ಜಿ ತರಗತಿಗಳ ಪ್ರಾರಂಭೋತ್ಸವವು ನ.28 ರಂದು ನಡೆಯಿತು.
















ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ವಿಠ್ಠಲದಾಸ್ ಎನ್.ಎಸ್.ಡಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಳಾಗಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಶೈನಿ ಕಿರಣ್, ಗ್ರಾಮಪಂಚಾಯತ್ ಸದಸ್ಯೆ ಶ್ರೀಮತಿ ಜಯಶ್ರೀ ಹಾಗೂ ಆಶಾ ಕಾರ್ಯಕರ್ತೆ ಶ್ರೀಮತಿ ಲಲಿತಾ ಉಪಸ್ಥಿತರಿದ್ದರು. ಎಲ್.ಕೆ.ಜಿ.ಯು.ಕೆ.ಜಿ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ಧನಲಕ್ಷ್ಮೀ ಗೊಂಚಲಿನ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ರವರು ಸಿಹಿತಿಂಡಿ ವಿತರಿಸಿದರು. ಮಕ್ಕಳ ಪೋಷಕರು, ಗ್ರಾಮಸ್ಥರು, ಪುಟಾಣಿ ಮಕ್ಕಳು, ಸಹಾಯಕಿ ಗುಲಾಬಿ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಇಂದಿರಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.










