ಮುಹಿಯದ್ದಿನ್ ರಿಫಾಯಿ ದಫ್ ಅಸೋಸಿಯೆಷನ್ ಪೇರಡ್ಕ – ಗೂನಡ್ಕ ವತಿಯಿಂದ ಎಂ ಜೆ ಎಂ ಪೇರಡ್ಕ ವಠಾರದಲ್ಲಿ ನ.29ರಂದು ತಾಲೂಕು ಮಟ್ಟದ ದಫ್ ಸ್ಪರ್ಧೆ ನಡೆಯಿತು.

















ಕಾರ್ಯಕ್ರಮದಲ್ಲಿ ತಾಜುಲ್ ಹುದಾ ರೆಂಜಾಡಿ ದೇರಳಕಟ್ಟೆ ತಂಡದ ದಫ್ ಪ್ರದರ್ಶನ ಪ್ರೇಕ್ಷಕರನ್ನುರಂಜಿಸಿತು. ತಾಲೂಕು ಮಟ್ಟದ ದಫ್ ಸ್ಪರ್ಧೆ ವಿಜೇತರು ಪ್ರಥಮ ದುಲ್ಫಕರ್ ದಫ್ ಅಸೋಸಿಯೇಷನ್ ಸುಳ್ಯ, ದ್ವಿತೀಯ ಎಂ ಜೆ ಎಂ ಹಯಾತುಲ್ ಇಸ್ಲಾಂ ಕಲ್ಲುಗುಂಡಿ, ತೃತೀಯ ಎಂ ಜೆ ಎಂ ಪೇರಡ್ಕ ತಂಡವು ಬಹುಮಾನ ಪಡೆದರು.
ಕಾರ್ಯಕ್ರಮವನ್ನು ಎಂ ಜೆ ಎಂ ಪೇರಡ್ಕ ಖತೀಬ್ ಅಹಮ್ಮದ್ ನಹಿಂ ಫೈಝಿ ಉಧ್ಘಾಟಿಸಿದರು ಕಾರ್ಯಕ್ರಮದಲ್ಲಿ ಸಜ್ಜನ ಅಧ್ಯಕ್ಷರಾದ ಉಮ್ಮರ್ ಬೀಜದಕಟ್ಟೆ, ಸುಡಾ ಅಧ್ಯಕ್ಷರಾದ ಮುಸ್ತಾಫ ಕೆ ಎಂ, ನಗರ ಪಂಚಾಯತ್ ಮಾಜಿ ಸದಸ್ಯ ಉಮ್ಮರ್ ಕೆ ಎಸ್, ಎಂ ಜೆ ಎಂ ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಮೈಲಿಕಲ್, ಎಂ ಆರ್ ಡಿ ಎ ಅಧ್ಯಕ್ಷರು ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಸಂಪಾಜೆ ಸೊಸೈಟಿ ನಿರ್ದೇಶಕರಾದ ಜಿ ಕೆ ಹಮೀದ್, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್, ಪಂಚಾಯತ್ ಸದಸ್ಯರಾದ ಅಬುಸಾಲಿ ಪಿ ಕೆ, ಸಂಟ್ಯಾರ್ ಪ್ರತಿಷ್ಟಾನ ಅಧ್ಯಕ್ಷರಾದ ಅಶ್ರಫ್ ಎಚ್ ಎ, ಎಂ ಆರ್ ಡಿ ಎ ಕಾರ್ಯದರ್ಶಿ ಖಾದರ್ ಮೊಟ್ಟೆoಗಾರ್ , ರಫೀಕ್ ಪ್ರಗತಿ, ಇರ್ಷಾದ್ ಎನ್ ಬಿ ಎಸ್, ಆಲಿ ಹಾಜಿ, ರಿಯಾಜ್ ಎಸ್ ಎ, ಫಾರೂಕ್ ಕಾನಕ್ಕೋಡ್, ಸಾಜೀದ್ ಐ ಜಿ, ಅಬ್ದುಲ್ ಕಲಾಮ್ ಸುಳ್ಯ, ಸಿದ್ದಿಕ್ ಕೊಡಿಯಮ್ಮೆ, ಇಕ್ಬಾಲ್ ಸುಣ್ಣಮೂಲೆ ಮೊದಲಾದವರು ಉಪಸ್ಥಿತರಿದ್ದರು.ಜಿ.ಕೆ.ಹಮೀದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಅಬ್ದುಲ್ ಖಾದರ್ ಮೊಟ್ಟಾಂಗಾರ್ ವಂದಿಸಿದರು.










