














ವಿಶ್ವಶಾಂತಿಯನ್ನು ಪ್ರೇರೇಪಿಸುವ ಅಂತರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪಂಜ ಲಯನ್ಸ್ ಕ್ಲಬನ್ನು ಪ್ರತಿನಿಧಿಸಿದ ಲಯನ್ಸ್ ಜಿಲ್ಲೆ 317 ಡಿ ಯಲ್ಲಿ ಸಾನ್ವಿ ನೇರಳ ಪ್ರಥಮ ಸ್ಥಾನವನ್ನು ಪಡೆದು ಇದೀಗ ಮಲ್ಟಿಪುಲ್ ಹಂತಕ್ಕೆ ಆಯ್ಕೆಯಾಗಿರುತ್ತಾಳೆ. ಸುಮಾರು 140 ಕ್ಲಬ್ ಗಳು ಭಾಗವಹಿಸಿರುವ ಈ ಚಿತ್ರಕಲಾ ಸ್ಪರ್ಧೆಯಲ್ಲಿ ವಿಶ್ವಶಾಂತಿಯನ್ನು ಸಾರುವ ಒಂದಾಗಿ ಒಟ್ಟಾಗಿ ಎನ್ನುವ ಧ್ಯೇಯವಾಕ್ಯವನ್ನು ನೀಡಲಾಗಿತ್ತು. ಈಗಾಗಲೇ ಹಲವಾರು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿರುವ ಪ್ರತಿಭಾನ್ವಿತ ಚಿತ್ರಕಲಾವಿದೆ ಸಾನ್ವಿ ನೇರಳ ಪಂಜದ ಸೋಮಶೇಖರ ನೇರಳ ಮತ್ತು ಕವಿತಾ ದಂಪತಿಗಳ ಸುಪುತ್ರಿ. ಪ್ರಸ್ತುತ ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿಧ್ಯಾರ್ಥಿನಿ. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ಇವರು ಮಾರ್ಗದರ್ಶನ ನೀಡಿರುತ್ತಾರೆ.










